ಬಿಗ್‌ಬಾಸ್ ಕನ್ನಡ ಸೀಸನ್-11ರ ರನ್ನರ್ ಅಪ್ ತ್ರಿವಿಕ್ರಮ್ ಉತ್ತಮವಾಗಿ ಆಟವಾಡಿ ಪ್ರೇಕ್ಷಕರ ಮನಗೆದ್ದಿದ್ದರು. ದೊಡ್ಮನೆಯಲ್ಲಿ ತ್ರಿವಿಕ್ರಮ್ ಅವರು ಭವ್ಯಾ ಗೌಡಗೆ ಪ್ರಪೋಸ್ ಮಾಡಿದ್ದರ ಬಗ್ಗೆ ಭಾರಿ ಚರ್ಚೆಯಾಗಿತ್ತು. ಹೀಗಾಗಿ ಇವರಿಬ್ಬರು ಪ್ರೀತಿಯಲ್ಲಿದ್ದಾರೆ, ಮದುವೆ ಆಗೋದು ಕನ್ಫರ್ಮ್ ಅನ್ನೋ ಸುದ್ದಿ ಹರಿದಾಡುತ್ತಿತ್ತು. ಆದರೆ ತ್ರಿವಿಕ್ರಮ್, “ಭವ್ಯಾ ನನಗಿಂತ ತುಂಬಾ ಚಿಕ್ಕವಳು, ಅವಳನ್ನು ಮದುವೆಯಾಗುವ ಯೋಚನೆ ಇಲ್ಲ ಎಂದು ಗಾಸಿಪ್ಗಳಿಗೆ ತೆರೆ ಎಳೆದಿದ್ದರು.
ಇದೀಗ ಸಂದರ್ಶನವೊಂದರಲ್ಲಿ ತ್ರಿವಿಕ್ರಮ್ ತಮ್ಮ ಲೈಫ್ ಸ್ಟೋರಿ, ಕಷ್ಟ-ಸುಖ, ಜೀವನದ ಪಾಠ, ಲವ್-ಬ್ರೇಕಪ್‌ಗಳು ಸೇರಿದಂತೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಹಳೆ ಗರ್ಲ್ ಫ್ರೆಂಡ್ ಜೊತೆ ಬ್ರೇಕಪ್ ಆಗುವುದಕ್ಕೆ ಕಾರಣ ಏನು ಅಂತ ತ್ರಿವಿಕ್ರಮ್ ರಿವೀಲ್ ಮಾಡಿದ್ದಾರೆ.
“ನನ್ನ ತಂದೆ ತೀರಿಕೊಂಡ 6 ತಿಂಗಳಲ್ಲೇ ಪ್ರೀತಿಸಿದ ಹುಡುಗಿ ಜೊತೆ ಬ್ರೇಕಪ್ ಆಯ್ತು. ಅದು ನನ್ನ ಸ್ಟ್ರಗ್ಲಿಂಗ್ ದಿನಗಳು, ಪ್ರೀತಿಯಲ್ಲಿ ಬಿದ್ದಿದ್ದೆ. ಆ ಹುಡುಗಿ ಮನೆ ಕಡೆ ಸೆಟಲ್ ಆಗಿದ್ದರು. ನಾನು ಸೆಟಲ್ ಆಗಬೇಕು ಅಂತ ಅವಳು ಬಯಸುತ್ತಿರಲಿಲ್ಲ. ಆದರೆ ನಾನು ಸೆಟಲ್ ಆಗಿರಲಿಲ್ಲ ಅನ್ನೋ ಕಾರಣಕ್ಕೆ ಅವರ ತಂದೆಯ ಒತ್ತಡ ಇತ್ತು. ಇಂದಲ್ಲಾ ನಾಳೆ ಈ ವಿಚಾರ ನಮ್ಮಿಬ್ಬರ ಮಧ್ಯೆ ಅಂತರ ಸೃಷ್ಟಿ ಮಾಡುತ್ತದೆ ಅನ್ನೋ ಭಾವನೆಯಿಂದ ಪರಸ್ಪರ ಮಾತನಾಡಿಕೊಂಡು ದೂರ ಆದೆವು” ಎಂದು ತ್ರಿವಿಕ್ರಮ್ ತಮ್ಮ ಬ್ರೇಕಪ್ ಸ್ಟೋರಿ ಬಗ್ಗೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : http://ಮಹಿಳಾ ಅಧಿಕಾರಿಗೆ ಅವಾಚ್ಯ ಪದದಿಂದ ನಿಂದನೆ – ಕಾಂಗ್ರೆಸ್ MLA ಪುತ್ರನ ವಿರುದ್ಧ FIR!
