ಕಟಕ್ನ ಬಾರಾಬತಿ ಸ್ಟೇಡಿಯಂನಲ್ಲಿ ನಿನ್ನೆ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್ಗಳಿಂದ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿದು ಇನ್ನು ಒಂದು ಪಂದ್ಯ ಇರುವಂತೆಯೇ 3 ಪಂದ್ಯಗಳ ಸರಣಿಯನ್ನ ವಶಪಡಿಸಿಕೊಂಡಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಭಾರತಕ್ಕೆ 305ರನ್ಗಳ ಗುರಿ ನೀಡಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ರೋಹಿತ್ ಪಡೆ 44.3 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಚೇಸ್ ಮಾಡಿ ಗೆಲುವು ಸಾಧಿಸಿದೆ. ನಾಯಕ ರೋಹಿತ್ ಶರ್ಮಾ 90 ಎಸೆತಗಳಲ್ಲಿ 119 ರನ್ಗಳಿಸಿ ಗೆಲುವಿನ ರೂವಾರಿಯಾಗಿದ್ದಾರೆ. ಹಾಗೆಯೇ ಟ್ರೊಲರ್ಸ್ಗಳ ಬಾಯಿ ಮುಚ್ಚಿಸಿದ್ದಾರೆ.
ಇಂಗ್ಲೆಂಡ್ ನೀಡಿದ 305ರನ್ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ, ಉಪನಾಯಕ ಶುಭ್ಮನ್ ಗಿಲ್ ಅದ್ಭುತ ಆರಂಭ ನೀಡಿದರು. ಈ ಇಬ್ಬರು ಮೊದಲ ವಿಕೆಟ್ಗೆ 100 ಎಸೆತಗಳಲ್ಲಿ 136 ರನ್ಗಳ ಜೊತೆಯಾಟ ನೀಡಿದರು. ಗಿಲ್ 52 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ಗಳ ನೆರವಿನಿಂದ 60 ರನ್ ಸಿಡಿಸಿ ಔಟ್ ಆದರು. ನಂತರ ಬಂದ ಕೊಹ್ಲಿ ಕೇವಲ 5 ರನ್ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.
ಆದರೆ 3ನೇ ವಿಕೆಟ್ಗೆ ಒಂದಾದ ಶ್ರೇಯಸ್ ಅಯ್ಯರ್ ಜೊತೆ ನಾಯಕ ರೋಹಿತ್ 61 ಎಸೆತಗಳಲ್ಲಿ 70 ರನ್ಗಳ ಜೊತೆಯಾಟ ನೀಡಿದರು. 90 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 7 ಸಿಕ್ಸರ್ ಹಾಗೂ 12 ಬೌಂಡರಿಗಳೊಂದಿಗೆ 119 ರನ್ಗಳಿಸಿ ಔಟ್ ಆದರು. ಅಕ್ಷರ್ ಪಟೇಲ್ ಜೊತೆ ಸೇರಿದ ಅಯ್ಯರ್ 4ನೇ ವಿಕೆಟ್ಗೆ 38 ರನ್ ಸೇರಿಸಿದರು. 47 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 44 ರನ್ಗಳಿಸಿದರು.
ಆ ನಂತರ ಬಂದ ಕೆಎಲ್ ರಾಹುಲ್ (10) ಹಾಗೂ ಹಾರ್ದಿಕ್ ಪಾಂಡ್ಯ (10) ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಅಕ್ಷರ್ ಪಟೇಲ್ 43 ಎಸೆತಗಳಲ್ಲಿ 4 ಬೌಂಡರಿ ಸಹಿತ ಅಜೇಯ 41 ರನ್ಗಳಿಸಿ ಹಾಗೂ ರವೀಂದ್ರ ಜಡೇಜಾ ಅಜೇಯ 11 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.









