ಸೆಲೆಬ್ರಿಟಿಗಳೇ ನನ್ನ ಕ್ಷಮಿಸಿ.. ಈ ಬಾರಿ ಬರ್ತಡೇಗೆ ಸಿಗಲ್ಲ – ನಟ ದರ್ಶನ್ ವಿಡಿಯೋ ಸಂದೇಶ!

ಸ್ಯಾಂಡಲ್‌ವುಡ್‌ ನಟ ದರ್ಶನ್‌ ಇದೀಗ ಫ್ಯಾನ್ಸ್‌ಗೆ ಬಿಗ್‌ ಅಪ್‌ಡೇಟ್‌ ಒಂದನ್ನು ಕೊಟ್ಟಿದ್ದಾರೆ. ದರ್ಶನ್ ಮತ್ತೆ ಸಿನಿಮಾಗಳ ಕಡೆ ಮುಖ ಮಾಡುತ್ತಿದ್ದು, ಹುಟ್ಟುಹಬ್ಬ ಕೂಡ ಹತ್ತಿರ ಬರ್ತಿದೆ. ಈಗಾಗಲೇ ಅಭಿಮಾನಿಗಳು ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದ್ದಾರೆ. ಆದರೆ ಈ ಬಾರಿ ಅದ್ಧೂರಿಯಾಗಿ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರಾ? ಇಲ್ವಾ? ಎಂಬ ಬಗ್ಗೆ ಅವರೇ ಇದೀಗ ಕ್ಲಾರಿಟಿ ಕೊಟ್ಟಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದರ್ಶನ್ ಅವರ​​ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಲು ಅಭಿಮಾನಿಗಳಿಗೆ ಕಾದು ಕುಳಿತಿದ್ರು. ಇದೀಗ ಜನ್ಮದಿನದ ಕುರಿತು ನಟ ದರ್ಶನ್‌ ಅವರು ವಿಡಿಯೋ ಬಿಡುಗಡೆ ಮಾಡಿದ್ದು, ತಮ್ಮ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡುವ ಮೂಲಕ ಶಾಕ್‌ ಕೊಟ್ಟಿದ್ದಾರೆ.

ದರ್ಶನ್​ ಹೇಳಿದ್ದೇನು? ಎಲ್ಲ ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನಮಸ್ಕಾರ. ನಿಮಗೆ ಎಷ್ಟೇ ಧನ್ಯವಾದ ಹೇಳಿದ್ರೂ , ಏನೇ ಪದ ಬಳಕೆ ಮಾಡಿದ್ರೂ ತುಂಬಾ ಕಡಿಮೆ. ನೀವು ತೋರಿಸದಷ್ಟು ಪ್ರೀತಿ ಅಭಿಮಾನ, ಅದನ್ನ ಯಾವ ತರ ರಿಟರ್ನ್‌‌ ಮಾಡಲಿ ಗೊತ್ತಾಗ್ತಿಲ್ಲ. ನನ್ನ ಬಗ್ಗೆ ವಿಶೇಷ ಕಾಳಜಿ ಹಾಗೂ ಅಭಿಮಾನವನ್ನ ಇಟ್ಟುಕೊಂಡಿದ್ದೀರಾ. ನೀವು ತುಂಬಾ ಆಸೆ ಪಟ್ಟಿದ್ದಿರೀ, ನನಗೂ ಸಹ ತುಂಬಾ ಆಸೆ ಇತ್ತು. ನನ್ನ ಸೆಲೆಬ್ರಿಟಿಗಳನ್ನ ಭೇಟಿ ಮಾಡಿ ಥ್ಯಾಂಕ್ಸ್‌ ಹೇಳಬೇಕು ಅಂತ.

ಪ್ರತಿ ಸರಿಯೂ ನಾನು ನನ್ನ ಹುಟ್ಟುಹಬ್ಬದ ದಿನ ನಿಮನ್ನು ಮೀಟ್​ ಮಾಡುತ್ತಿದ್ದೆ. ಆದರೆ, ಈ ಬಾರಿ ಆರೋಗ್ಯ ಸಮಸ್ಯೆ ಇದೆ. ನನಗೆ ಯಾವ ಆರೋಗ್ಯ ಸಮಸ್ಯೆ ಇದೆ ಅಂತ ನಿಮಗೂ ಗೊತ್ತು. ಆಪರೇಷನ್‌ ನಾನು ಮಾಡಿಸಲೇ ಬೇಕು. ನನಗೆ ತುಂಬಾ ಹೊತ್ತು ನಿಲ್ಲಲು ಆಗುವುದಿಲ್ಲ. ಹೀಗಾಗಿ ನಾನು ಈ ಬಾರಿ ನಿಮ್ಮನ್ನು ಭೇಟಿ ಮಾಡಲು ಕಷ್ಟವಾಗಲಿದೆ. ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಪ್ರೀತಿಯ ಮನವಿ. ಈ ವರ್ಷ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಕ್ಷಮೆ ಇರಲಿ ಎಂದು ದರ್ಶನ್ ಹೇಳಿಕೊಂಡಿದ್ದಾರೆ.

ಹಾಗೆಯೇ ನಾನು ಮುಂದಿನ ದಿನಗಳಲ್ಲಿ ನಿಮ್ಮನ್ನ ಭೇಟಿ ಮಾಡುತ್ತೇನೆ. ಖಂಡಿತವಾಗಿಯೂ ನಾನು ನಿಮ್ಮನ್ನ ಭೇಟಿ ಮಾಡೇ ಮಾಡುತ್ತೇನೆ ಎಂದು ದರ್ಶನ್ ಹೇಳಿದ್ದಾರೆ.

ಸದ್ಯ ಬೆನ್ನು ನೋವಿನಿಂದ ದರ್ಶನ್ ಬಳಲುತ್ತಿದ್ದಾರೆ. ಆದಷ್ಟು ಬೇಗ ಚೇತರಿಸಿಕೊಳ್ಳುವ ಭರವಸೆಯಲ್ಲಿದ್ದಾರೆ. ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಹೆಚ್ಚು ವಿಶ್ರಾಂತಿ ಪಡೆಯುತ್ತಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ಸಿಕ್ಕಿ ದರ್ಶನ್ ನಿರಾಳರಾಗಿದ್ದಾರೆ.

ಇದನ್ನೂ ಓದಿ : http://ಅಕ್ರಮವಾಗಿ CDR ಪಡೆದು ಐಶ್ವರ್ಯಾ ಗೌಡ ಪಂಗನಾಮ – ಗೋಲ್ಡ್ ವಂಚಕಿ ವಿರುದ್ಧ ಮತ್ತೊಂದು FIR!

Btv Kannada
Author: Btv Kannada

Leave a Comment

Read More