ಬೆಂಗಳೂರು : ಸ್ಯಾಂಡಲ್‌ವುಡ್ ಡ್ರಗ್ ಕೇಸ್ ಆರೋಪಿಯಾಗಿದ್ದ ರಾಹುಲ್ ತೋನ್ಸೆ ವಿರುದ್ಧ ಕ್ಯಾಸಿನೋದಲ್ಲಿ ಹೂಡಿಕೆ ಮಾಡಿಸಿ, ಲಾಭದ ಆಸೆ ತೋರಿಸಿ ಬೆಂಗಳೂರಿನ ಉದ್ಯಮಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

ಈ ಪ್ರಕರಣ ಸಂಬಂಧ ರಾಹುಲ್ ತೋನ್ಸೆ ಹಾಗೂ ಆತನ ಅಪ್ಪ ರಾಮಕೃಷ್ಣ, ತಾಯಿ ರಾಜೇಶ್ವರಿ ಸೇರಿ ಐವರ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.
ಸದ್ಯ ರಾಹುಲ್ ತೋನ್ಸ್ ತಂದೆ ಪ್ರಕರಣದ ಎ1 ಆರೋಪಿ ರಾಮಕೃಷ್ಣ ರಾವ್ ಅವರನ್ನು ಬಂಧಿಸಲಾಗಿದೆ. ಹೊಡಿಕೆ ನೆಪದಲ್ಲಿ ವಂಚನೆ ಮಾಡಿದ ಆರೋಪದ ಮೇಲೆ ರಾಹುಲ್ ತೋನ್ಸೆ ವಿರುದ್ಧ ಈ ಹಿಂದೆ ನಟಿ ಸಂಜನಾ ಗಲ್ರಾನಿ ಕೂಡ ಇಂದಿರಾನಗರದಲ್ಲಿ ದೂರು ನೀಡಿದ್ದರು. ಇದೀಗ ಬಸವೇಶ್ವರ ನಗರ ಉದ್ಯಮಿ ವಿವೇಕ್ ಹೆಗ್ಡೆ ಹಾಗೂ ಅವರ ಸ್ನೇಹಿತರಿಗೆ 25.5 ಕೋಟಿ ರೂಪಾಯಿ ಮೋಸ ಮಾಡಿರುವ ಆರೋಪದ ಮೇಲೆ ದೂರು ದಾಖಲಾಗಿದೆ.
ದುಬೈ ಹಾಗೂ ಶ್ರೀಲಂಕಾಗೆ ಕರೆದೊಯ್ದು ಹೂಡಿಕೆ ಮಾಡುವಂತೆ ರಾಹುಲ್ ತೋನ್ಸೆ ನಂಬಿಸಿದ್ದು, ಈ ಕೇಸ್ ಸಂಬಂಧ ಬಸವೇಶ್ವರ ನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


ಇದನ್ನೂ ಓದಿ : http://ಎಸ್ ಸುರೇಶ್ ಕುಮಾರ್ ಹೆಸರಲ್ಲಿ ಫೇಕ್ ಅಕೌಂಟ್ ಮಾಡಿ ಹಣಕ್ಕೆ ಬೇಡಿಕೆ – ಫೇಸ್ಬುಕ್ ಖದೀಮರ ವಿರುದ್ಧ ಶಾಸಕರಿಂದ ದೂರು!









