ಅಕ್ರಮವಾಗಿ CDR ಪಡೆದು ಐಶ್ವರ್ಯಾ ಗೌಡ ಪಂಗನಾಮ – ಗೋಲ್ಡ್ ವಂಚಕಿ ವಿರುದ್ಧ ಮತ್ತೊಂದು FIR!

ಡಿ.ಕೆ. ಸುರೇಶ್ ತಂಗಿ ಎಂದು ಕೋಟಿ-ಕೋಟಿ ವಂಚನೆ ಮಾಡಿದ ಪ್ರಕರಣದಲ್ಲಿ ಮತ್ತೊಂದು ಶಾಕಿಂಗ್ ವಿಚಾರ ಬಯಲಾಗಿದೆ. ಪೊಲೀಸರ ತನಿಖೆ ವೇಳೆ ಐಶ್ವರ್ಯಾ ಗೌಡ ಅಕ್ರಮವಾಗಿ ಹಲವು ವ್ಯಕ್ತಿಗಳ ಸಿಡಿಆರ್ ಪಡೆದುಕೊಂಡಿದ್ದಳು ಎಂಬುದು ಬೆಳಕಿಗೆ ಬಂದಿದೆ.

ಐಶ್ವರ್ಯಾ ಮೊಬೈಲ್ ಡೇಟಾ ಎಕ್ಸ್ಟ್ರಾಕ್ಟ್ ವೇಳೆ ಸಿಡಿಆರ್ ಪಡೆದಿರುವು ಬಯಲಾಗಿದೆ. ಹೀಗಾಗಿ ಐಶ್ವರ್ಯಾ ವಿರುದ್ಧ ಬ್ಯಾಟರಾಯನಪುರ ಠಾಣೆಯಲ್ಲಿ ಮತ್ತೊಂದು ಎಫ್.ಐ.ಆರ್ ದಾಖಲಾಗಿದ್ದು, ತನಿಖಾಧಿಕಾರಿ ಎಸಿಪಿ‌ ಭರತ್ ರೆಡ್ಡಿ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.

ಐಶ್ವರ್ಯಾ ಸಿಡಿಆರ್ ಆಟ : ಪ್ರಕರಣದ ತನಿಖೆ ವೇಳೆ ಐಶ್ವರ್ಯಾ ಹಾಗೂ ಆಕೆಯ ಪತಿಯ ಮೊಬೈಲ್​ನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಂಚಕಿ ಐಶ್ವರ್ಯಾ ಬಳಸುತ್ತಿದ್ದ 5 ಮೊಬೈಲ್ ಹಾಗೂ ಆಕೆಯ ಪತಿಯ 2 ಫೋನ್ ವಶಕ್ಕೆ ಪಡೆದು ಮಿರರ್ ಇಮೇಜಿಂಗ್ ಹಾಗೂ ಡೇಟಾ ಎಕ್ಸ್ಟ್ರಾಕ್ಟ್​​ಗೆ ನೀಡಲಾಗಿತ್ತು.

ತನಿಖಾಧಿಕಾರಿ ಎಸಿಪಿ ಭರತ್ ಕೋರ್ಟ್ ಒಪ್ಪಿಗೆ ಪಡೆದು ಪಶ್ಚಿಮ ಸೆನ್ ಠಾಣೆಗೆ ಮೊಬೈಲ್​​ಗಳನ್ನು ಕಳುಹಿಸಿದ್ದರು. ಅಲ್ಲಿ ಐಶ್ವರ್ಯಾ ಐಫೋನ್ ಡೇಟಾ ಎಕ್ಸ್ಟ್ರಾಕ್ಟ್ ವೇಳೆ ಶಾಕಿಂಗ್ ವಿಚಾರ ಬಯಲಾಗಿದೆ. ಐಶ್ವರ್ಯಾ ಗೌಡ ಅಕ್ರಮವಾಗಿ ಹಲವು ವ್ಯಕ್ತಿಗಳ ಸಿಡಿಆರ್ ಪಡೆದುಕೊಳ್ತಿದ್ದಳು ಎಂಬುವುದು ಬಯಲಾಗಿದೆ.

ಅಪರಾಧ ಕೃತ್ಯದ ತನಿಖೆ ವೇಳೆ ತನಿಖಾಧಿಕಾರಿಗಳಿಗೆ ಮಾತ್ರ ಸಿಡಿಆರ್ ನೀಡಲಾಗುತ್ತೆ. ಅಪರಾಧ ಕೃತ್ಯ ಹೊರತುಪಡಿಸಿ ಯಾರಿಗೂ ಖಾಸಗಿ ಡೇಟಾ ನೀಡುವಂತಿಲ್ಲ. ಆದರೆ ಅಕ್ರಮವಾಗಿ ವಂಚಕಿ ಐಶ್ವರ್ಯಾ ಸಿಡಿಆರ್ ಪಡೆದುಕೊಂಡಿದ್ದು ಬಹಿರಂಗವಾಗಿದೆ. ದೂರುದಾರೆ ಮಂಜುಳಾ ಪಾಟೀಲ್ ಸೇರಿ 4 ಜನರ ನಂಬರ್ ಸಿಡಿಆರ್ ಡೇಟಾ ಮೊಬೈಲ್‌ನಲ್ಲಿ ಪತ್ತೆಯಾಗಿದೆ. ಸಿಡಿಆರ್ ಮೂಲಕ ಯಾರ ಜೊತೆ ಕಂಟ್ಯಾಕ್ಟ್ ಹೊಂದಿದ್ದಾರೆ ಅಂತ ಐಶ್ವರ್ಯಾ ತಿಳಿದುಕೊಳ್ತಿದ್ಲು. ಅದರಂತೆ ಪಕ್ಕಾ ಪ್ಲಾನ್ ಮಾಡಿ ಪಂಗನಾಮ ಹಾಕ್ತಿದ್ದಳು.

ಇನ್ನು ವಂಚಕಿ ಐಶ್ವರ್ಯಾ ಜೊತೆಗೆ ಪೊಲೀಸ್ ಅಧಿಕಾರಿಯೂ ಶಾಮೀಲಾಗಿದ್ದರು ಎನ್ನಲಾಗಿದೆ. ಹಾಗಾಗಿ ಎಸಿಪಿ ಭರತ್ ರೆಡ್ಡಿ ಐಶ್ವರ್ಯಾಗೆ ಸಿಡಿಆರ್ ನೀಡಿದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಸದ್ಯ ಎಸಿಪಿ ಭರತ್ ರೆಡ್ಡಿ‌ ನೀಡಿದ ದೂರಿನ‌ ಆಧಾರದಲ್ಲಿ ಬ್ಯಾಟರಾನಪುರ ಠಾಣೆಯಲ್ಲಿ ಎಫ್.ಐ.ಆರ್ ದಾಖಾಲಾಗಿದೆ.

ಇದನ್ನೂ ಓದಿ : http://ಆನ್‌ಲೈನ್‌ ಜೂಜಿಗಾಗಿ ಹಣವಿಲ್ಲವೆಂದು ಸರಗಳ್ಳತನಕ್ಕೆ ಇಳಿದ ಆಸಾಮಿ ಅರೆಸ್ಟ್

Btv Kannada
Author: Btv Kannada

Leave a Comment

Read More