ನಾಗ್ಪುರ : ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 4 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಅಮೋಘ ಜಯ ಸಾಧಿಸುವ ಮೂಲಕ ಭಾರತ ದೊಡ್ಡ ಸವಾಲಿಗೆ ಸಿದ್ಧ ಎನ್ನುವ ಸಂದೇಶ ರವಾನಿಸಿದೆ.
ಇಂಗ್ಲೆಂಡ್ ನೀಡಿದ್ದ 249 ರನ್ಗಳ ಗುರಿಯನ್ನು ಬೆನ್ನತ್ತಿದ ಭಾರತ, ಶುಭ್ ಮನ್ ಗಿಲ್ (87 ರನ್), ಶ್ರೇಯಸ್ ಅಯ್ಯರ್ (59 ರನ್) ಮತ್ತು ಅಕ್ಸರ್ ಪಟೇಲ್ (52 ರನ್) ಅವರ ಅರ್ಧಶತಕಗಳ ನೆರವಿನಿಂದ ಇನ್ನೂ 11.2 ಓವರ್ ಇರುವಂತೆಯೇ ಗೆಲುವಿನ ದಡ ಸೇರಿದೆ. ಆ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.

ಭಾರತ ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಯಶಸ್ವಿ ಜೈಸ್ವಾಲ್ 22 ಎಸೆತಗಳಲ್ಲಿ 15 ರನ್ ಗಳಿಸಿ ಔಟಾದರೆ ರೋಹಿತ್ ಶರ್ಮಾ 2 ರನ್ ಗಳಿಸಿ ಫೆವಿಲಿಯನ್ ನತ್ತ ಮುಖ ಮಾಡಿದರು. ಬಳಿಕ ಕೆಎಲ್ ರಾಹುಲ್ ಕೇವಲ 2 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.
ತದನಂತರ ಕ್ರಿಸ್ಗೆ ಎಂಟ್ರಿ ಕೊಟ್ಟ ಶ್ರೇಯಸ್ ಅಯ್ಯರ್ ಭರ್ಜರಿ ವಾಪಸಾತಿ ಮಾಡಿದ್ದು, 36 ಎಸೆತಗಳಲ್ಲಿ 9 ಬೌಂಡರಿ 2 ಸಿಕ್ಸರ್ ಸಹಿತ 59 ರನ್ ಗಳಿಸಿದರು. ಅಕ್ಷರ್ ಪಟೇಲ್ 47 ಎಸೆತಗಳಲ್ಲಿ 52 ರನ್ ಗಳಿಸಿದರು. ಶುಭಮನ್ ಗಿಲ್ 96 ಎಸೆತಗಳಲ್ಲಿ 87 ರನ್ ಗಳಿಸಿದರು. ಈ ಮೂವರ ಭರ್ಜರಿ ಬ್ಯಾಟಿಂಗ್ ನರವಿನಿಂದ ಭಾರತದ ಗೆಲುವು ಸುಲಭವಾಯಿತು.
ಇದನ್ನೂ ಓದಿ : http://ಮಾಲ್ಡೀವ್ಸ್ನಲ್ಲಿ ನಟಿ ಅಮೂಲ್ಯ ಎಂಜಾಯ್.. ಪತಿ ಹುಟ್ಟುಹಬ್ಬಕ್ಕೆ ಮಕ್ಕಳ ಜೊತೆ ಸೆಲೆಬ್ರೇಷನ್!









