ನಾಗ ಚೈತನ್ಯ-ಸಾಯಿ ಪಲ್ಲವಿ ಚಿತ್ರಕ್ಕೆ ಪೈರಸಿ ಕಾಟ.. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ “ತಾಂಡೇಲ್” ಲೀಕ್!

ಟಾಲಿವುಡ್​ನಲ್ಲಿ ನಾಗ ಚೈತನ್ಯ, ಸಾಯಿ ಪಲ್ಲವಿ ನಟನೆಯ ಬಹುನಿರೀಕ್ಷಿತ ತಾಂಡೇಲ್ ಸಿನಿಮಾ ಇಂದು ಅದ್ಧೂರಿಯಾಗಿ ರಿಲೀಸ್ ಆಗಿದೆ. ಆದರೆ ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ಸಿನಿಮಾಗೆ ಪೈರಸಿ ಕಾಟ ಎದುರಾಗಿದ್ದು, ಕೆಲ ಪೈರಸಿ ವೆಬ್ ಸೈಟ್​​ಗಳಲ್ಲಿ ಸಿನಿಮಾ ರಿಲೀಸ್ ಆಗಿದೆ.

ಚಂದೂ ಮೊಂಡೇಟಿ ನಿರ್ದೇಶನದ ತಾಂಡೇಲ್ ಸಿನಿಮಾ ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಶ್ರೀಕಾಕುಳಂನ ಮೀನುಗಾರನೋರ್ವ ಪಾಕಿಸ್ತಾನದ ಜಲಗಡಿ ಪ್ರವೇಶಿಸಿ ಬಂಧನಕ್ಕೆ ಒಳಗಾಗಿ ಅನುಭವಿಸುವ ಚಿತ್ರಹಿಂಸೆಯ ಕಥೆಯನ್ನು ತಾಂಡೇಲ್ ಒಳಗೊಂಡಿದೆ. ನಾಗ ಚೈತನ್ಯ ಮೀನುಗಾರನ ಪಾತ್ರದಲ್ಲಿ ನಟಿಸಿದ್ದು, ಸಾಯಿ ಪಲ್ಲವಿ ನಾಯಕಿಯಾಗಿದ್ದಾರೆ.

ಥಿಯೇಟರ್​ಗಳಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿಯ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾಂಡೇಲ್​​ ಚಿತ್ರಕ್ಕೆ ದೇವಿಶ್ರೀ ಪ್ರಸಾದ್​ ಮ್ಯೂಸಿಕ್​ ನೀಡಿದ್ದು. ಹಾಡುಗಳಿಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಡಿಎಸ್​ಪಿ ಸಂಗೀತಕ್ಕೆ ಜನ ಫುಲ್ ಮಾರ್ಕ್ಸ್ ನೀಡ್ತಿದ್ದಾರೆ.

ಇದನ್ನೂ ಓದಿ : http://ಯುವ ಜನತೆಯಲ್ಲಿ ಹಠಾತ್ ಸಾವು – ತಜ್ಞರು, ವಿಜ್ಞಾನಿಗಳ ಸಮಿತಿ ರಚಿಸಿ ಅಗತ್ಯ ಕ್ರಮಕ್ಕೆ ಸಿಎಂ ಸೂಚನೆ!

Btv Kannada
Author: Btv Kannada

Leave a Comment

Read More