ಬೆಂಗಳೂರು : ರಾಜ್ಯದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ಮುಡಾ ಹಗರಣದ ತನಿಖೆಯನ್ನು ಸಿಬಿಐ ನೀಡಬೇಕಾ ಬೇಡ್ವೋ ಎನ್ನುವುದನ್ನು ಹೈಕೋರ್ಟ್ ತೀರ್ಪು ನೀಡಲಿದೆ. ಮತ್ತೊಂದೆಡೆ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ ತೀರ್ಪು ಪ್ರಕಟವಾಗಲಿದೆ. ಹಾಗಾಗಿ ಹಾಲಿ, ಮಾಜಿ ಸಿಎಂಗಳಿಗೆ ನಾಳೆ ಮಹತ್ವದ ದಿನವಾಗಿದೆ.
ಮುಡಾ ನಿವೇಶನ ಹಂಚಿಕೆ ಸಂಬಂಧ ಸಿದ್ದರಾಮಯ್ಯ ವಿರುದ್ಧದ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ್ದು, ನಾಳೆ ಬೆಳಗ್ಗೆ 10.30ಕ್ಕೆ ಧಾರವಾಡ ಹೈಕೋರ್ಟ್ ಪೀಠದಲ್ಲಿ ತೀರ್ಪು ಪ್ರಕಟವಾಗಲಿದೆ.
ಅದೇ ರೀತಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ತೀರ್ಪು ಅನ್ನೂ ನಾಳೆ ಹೈಕೋರ್ಟ್ ಪ್ರಕಟಿಸಲಿದೆ. ನ್ಯಾ. ಎಂ. ನಾಗಪ್ರಸನ್ನ ತೀರ್ಪು ಪ್ರಕಟಿಸಲಿದ್ದು, ಹಾಲಿ, ಮಾಜಿ ಸಿಎಂ ಭವಿಷ್ಯ ನಾಳೆ ಹೈಕೋರ್ಟ್ನಲ್ಲಿ ನಿರ್ಧಾರವಾಗಲಿದೆ.
ಇದನ್ನೂ ಓದಿ : http://ಮಾಲ್ಡೀವ್ಸ್ನಲ್ಲಿ ನಟಿ ಅಮೂಲ್ಯ ಎಂಜಾಯ್.. ಪತಿ ಹುಟ್ಟುಹಬ್ಬಕ್ಕೆ ಮಕ್ಕಳ ಜೊತೆ ಸೆಲೆಬ್ರೇಷನ್!
