TRP ವಿಚಾರದಲ್ಲಿ ‘ಬಿಗ್​ಬಾಸ್ ಫಿನಾಲೆ’ ದಾಖಲೆ.. ನಂ-1 ಧಾರಾವಾಹಿ ಇದೇನಾ?

ಕನ್ನಡ ಕಿರುತೆರೆಯಲ್ಲಿ ಬಿಗ್​ಬಾಸ್ ಶೋ ದಾಖಲೆಗಳ ಮೇಲೆ ದಾಖಲೆಗಳನ್ನು ಸೃಷ್ಟಿಸಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಹಲವು ದಾಖಲೆಗಳನ್ನು ಬರೆದಿತ್ತು. ಇದೀಗ ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆ ಟಿಆರ್​ಪಿ ಹೊರ ಬಿದ್ದಿದ್ದು, ಟಿಆರ್​ಪಿ ವಿಚಾರದಲ್ಲಿ ಫಿನಾಲೆ ಎಪಿಸೋಡ್ ದಾಖಲೆ ಬರೆದಿದೆ.

ಬಿಗ್ ಬಾಸ್ ಶನಿವಾರದ ಎಪಿಸೋಡ್ 9.9 ಟಿವಿಆರ್ ಪಡೆದರೆ ಭಾನುವಾರದ ಎಪಿಸೋಡ್ 13.7 ಟಿವಿಆರ್ ಪಡೆದುಕೊಂಡಿದೆ. ಈ ಮೂಲಕ ಈ ರಿಯಾಲಿಟಿ ಶೋ ದಾಖಲೆಯ ಟಿಆರ್​ಪಿ ಪಡೆದುಕೊಂಡಿದೆ. ಕಳೆದ ಸೀಸನ್​ಗಿಂತ ಈ ಸೀಸನ್ ಉತ್ತಮ ಟಿಆರ್​ಪಿ ಪಡೆದು ಸೀಸನ್​ನ ಕೊನೆಗೊಳಿಸಿದೆ.

ಕಿಚ್ಚ ಸುದೀಪ್ ಅವರು ನಡೆಸಿಕೊಟ್ಟ ಫಿನಾಲೆ ಎಪಿಸೋಡ್​ನಲ್ಲಿ ಹನುಮಂತ ಲಮಾಣಿ ಅವರು ಕಪ್ ಗೆದ್ದರೆ ತ್ರಿವಿಕ್ರಂ ಅವರು ರನ್ನರ್​ ಅಪ್ ಆದರು. ಈ ಎಪಿಸೋಡ್​ನ ಸಾಕಷ್ಟು ಸಂಖ್ಯೆಯಲ್ಲಿ ವೀಕ್ಷಣೆ ಮಾಡಲಾಗಿದೆ.

ಧಾರಾವಾಹಿಗಳಲ್ಲಿ ನೋಡೋದಾದ್ರೆ ‘ಶ್ರಾವಣಿ ಸುಬ್ರಮಣ್ಯ’ ಟಿಆರ್​ಪಿಯಲ್ಲಿ ಮೊದಲ ಸ್ಥಾನದಲ್ಲಿ ಇದೆ. ಈ ಮೊದಲು ಎರಡು ಹಾಗೂ ಮೂರನೇ ಸ್ಥಾನದಲ್ಲಿ ಇರುತ್ತಿದ್ದ ಈ ಧಾರಾವಾಹಿ ಈಗ ಮೊದಲ ಸ್ಥಾನ ಪಡೆದುಕೊಂಡಿದೆ ಅನ್ನೋದು ವಿಶೇಷ.

ಇನ್ನು ಇತ್ತೀಚೆಗೆ ಪ್ರಸಾರ ಆರಂಭಿಸಿರೋ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಬ್ಲಾಕ್​ಬಸ್ಟರ್ ಎನಿಸಿಕೊಂಡಿದೆ. ಈ ಧಾರಾವಾಹಿ, ನಗರ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದಿದೆ. ಓಪನಿಂಗ್ ವೀಕ್​ನಲ್ಲಿ ಇಷ್ಟು ಒಳ್ಳೆಯ ಟಿಆರ್​ಪಿ ಪಡೆದುಕೊಂಡಿದ್ದು ತಂಡಕ್ಕೆ ಖುಷಿ ನೀಡಿದೆ. ಮೂರನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’, ನಾಲ್ಕನೇ ಸ್ಥಾನದಲ್ಲಿ ‘ಅಣ್ಣಯ್ಯ’ ಧಾರಾವಾಹಿ ಇದೆ. ಕಲರ್ಸ್​​ನಲ್ಲಿ ಆರಂಭ ಆದ ‘ವಧು’, ‘ಅಣ್ಣಯ್ಯ’, ‘ನೂರು ಜನ್ಮಕು’ ಧಾರಾವಾಹಿಗಳು ಸಾಧಾರಣ ಟಿಆರ್​ಪಿ ಪಡೆದುಕೊಂಡಿವೆ.

ಇದನ್ನೂ ಓದಿ : http://ದಯವಿಟ್ಟು ಕ್ಷಮಿಸಿ.. ಈ ವಿಚಾರ ಇಲ್ಲಿಗೆ ಬಿಡಿ.. ‘ಬಿಗ್’ ವಿನ್ನರ್​​ ಹನುಮಂತು ಅವಮಾನಿಸಿದ್ದಕ್ಕೆ ಹಂಸಾ ಕ್ಷಮೆಯಾಚನೆ!

Btv Kannada
Author: Btv Kannada

Leave a Comment

Read More