ಸಿಲಿಕಾನ್​ ಸಿಟಿಯಲ್ಲಿ ಮತ್ತೆ ಟ್ರಾಫಿಕ್ ಪೊಲೀಸರ​ ಹಾವಳಿ – ಚಿಲ್ಲರೆ ಹಣಕ್ಕಾಗಿ ಬೈಕ್ ಸವಾರನ ಬಳಿ PSI ನಾಗರಾಜ್ ಚೌಕಾಸಿ!

ಬೆಂಗಳೂರಿನ ರಸ್ತೆಗಳಲ್ಲಿ ಕೆಲ ದಿನಗಳ ಕಾಲ ಸೈಲೆಂಟ್ ಆಗಿದ್ದ ಟ್ರಾಫಿಕ್ ಪೊಲೀಸರ​​ ಹಾವಳಿ ಮತ್ತೆ ಶುರುವಾಗಿದೆ. ನಗರದ ರಸ್ತೆಗಳ ಮಧ್ಯದಲ್ಲಿ ವಾಹನಗಳನ್ನು ಅಡ್ಡ ಹಾಕಿ ದಂಡ ವಸೂಲಿ ಮಾಡಬಾರದು ಎಂದು DG-IGP ಆದೇಶವಿದ್ರೂ ಕೂಡ ಟ್ರಾಫಿಕ್ ಪೊಲೀಸರು ಮಾತ್ರ ರಸ್ತೆಯಲ್ಲಿ ತಮ್ಮ ಚಾಳಿಯನ್ನು ಮುಂದುವರಿಸಿದ್ದಾರೆ.

ಇದೀಗ ಉಪ್ಪಾರಪೇಟೆ ಟ್ರಾಫಿಕ್ ಸಬ್ ಇನ್ಸ್​ಪೆಕ್ಟರ್ ವಿರುದ್ಧ ಲಂಚ ವಸೂಲಿ ಆರೋಪ ಕೇಳಿ ಬಂದಿದೆ. ಅವೆನ್ಯೂ ರಸ್ತೆಯಲ್ಲಿ ಉಪ್ಪಾರಪೇಟೆ PSI ನಾಗರಾಜ್ ಮೇಲೆ 400 ರೂಪಾಯಿ ಲಂಚ ಪಡೆದ ಆರೋಪ ಇದ್ದು, ವ್ಯಾಪಾರದಲ್ಲಿ ಚೌಕಾಸಿ ಮಾಡೋ ರೀತಿ ಇನ್ನೂ 100 ರೂಪಾಯಿ ಸೇರಿಸಿ ಕೊಡು ಎಂದು ಅಂಗಲಾಚಿದ್ದಾನೆ.

1 ಸಾವಿರ ರೂಪಾಯಿ ಕೊಡು ಇಲ್ಲ ಅಂದ್ರೆ ಐನೂರಾದ್ರೂ ಕೊಡು ಎಂದು PSI ನಾಗರಾಜ್ ಬೇಡಿಕೊಂಡಿದ್ದಾರೆ. ಕೊನೆಗೆ ಬೈಕ್ ಸವಾರನೊಬ್ಬ ನನ್ನ ಬಳಿ ಇರೋದೇ 400 ರೂ. ಎಂದು ಟ್ರಾಫಿಕ್ ಪೊಲೀಸರಿಗೆ ಕೊಟ್ಟು ತೆರಳಿದ್ದಾನೆ.

PSI ನಾಗರಾಜ್ ಹಾಗೂ ಸಿಬ್ಬಂದಿ ಲಂಚಾವತಾರದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಘಟನೆ ಬಗ್ಗೆ ಇನ್ಸ್​​ಪೆಕ್ಟರ್ ಬಳಿ ಹಿರಿಯ ಅಧಿಕಾರಿಗಳು ಮಾಹಿತಿ ಕೇಳಿದ್ದಾರೆ. PSI ನಾಗರಾಜ್ ಹಾಗೂ ಸಿಬ್ಬಂದಿ ಲಂಚಾವತಾರದ ವಿಡಿಯೋ ನೋಡಿದ ನೆಟ್ಟಿಗರು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ : https://btvkannada.com/2025/02/05/boys-vs-girls-show-quit-bhavyagowda/

Btv Kannada
Author: Btv Kannada

Leave a Comment

Read More

01:37