ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಈಗ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ಅನೇಕ ಕಲಾವಿದರು ಅಭಿನಯಿಸುತ್ತಿದ್ದು, ಮುಖ್ಯವಾಗಿ ಪರಭಾಷೆಯ ಸ್ಟಾರ್ ನಟ-ನಟಿಯರು ಕೂಡ ಸಿನಿಮಾದಲ್ಲಿದ್ದಾರೆ.

ಮುಂಬೈ, ಗೋವಾದಲ್ಲಿ ಶೂಟಿಂಗ್ ನಡೆಸಿದ ಬಳಿಕ ಮತ್ತೆ ಬೆಂಗಳೂರಿನಲ್ಲಿ ಟಾಕ್ಸಿಕ್ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು, ಈಗ ನಟಿ ನಯನತಾರಾ ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಸುದ್ದಿಯೊಂದು ಈಗ ಚರ್ಚೆಗೆ ಗ್ರಾಸವಾಗಿದೆ.
‘ಟಾಕ್ಸಿಕ್’ ಸಿನಿಮಾಗೆ ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕಿ ಗೀತು ಮೋಹನ್ದಾಸ್ ಅವರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದ ಪಾತ್ರವರ್ಗದಲ್ಲಿ ಕೂಡ ಮಹಿಳೆಯರು ಮಿಂಚುತ್ತಿದ್ದಾರೆ. ಬಾಲಿವುಡ್ ಬೆಡಗಿಯರಾದ ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಶಿ ಅವರು ಪಾತ್ರವರ್ಗದಲ್ಲಿ ಇದ್ದಾರೆ. ದಕ್ಷಿಣ ಭಾರತ ಹಾಗೂ ಬಾಲಿವುಡ್ನಲ್ಲಿ ಕೂಡ ಹವಾ ಕ್ರಿಯೇಟ್ ಮಾಡಿರುವ ನಯನತಾರಾ ‘ಟಾಕ್ಸಿಕ್’ ತಾರಾಬಳಗಕ್ಕೆ ಎಂಟ್ರಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಕೆಜಿಎಫ್: ಚಾಪ್ಟರ್ 1’ ಮತ್ತು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾಗಳ ಗೆಲುವಿನ ನಂತರ ಯಶ್ ಅವರ ಜನಪ್ರಿಯತೆ ವಿಶ್ವಮಟ್ಟದಲ್ಲಿ ಹಬ್ಬಿದೆ. ‘ಟಾಕ್ಸಿಕ್’ ಸಿನಿಮಾಗಾಗಿ ದೊಡ್ಡ ದೊಡ್ಡ ತಂತ್ರಜ್ಞರು ಮತ್ತು ಕಲಾವಿದರು ಕರುನಾಡಿಗೆ ಬರುವಂತೆ ಯಶ್ ಮಾಡಿದ್ದಾರೆ. ಸದ್ಯ ಟಾಕ್ಸಿಕ್ನಲ್ಲಿ ಯಾರ ಪಾತ್ರದ ಲುಕ್ ಯಾವ ರೀತಿ ಇರಲಿದೆ ಎಂಬುದನ್ನು ತಿಳಿಯುವ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ.
ಇದನ್ನೂ ಓದಿ : https://btvkannada.com/2025/02/05/kumbhmela-modi-bath-trivenisangam/
