ಬೆಂಗಳೂರು : ಇಂದು ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಉದ್ಯಮಿಗಳು, ಬಿಲ್ಡರ್ಸ್ಗಳ ಮನೆ-ಕಚೇರಿಗಳ ಮೇಲೆ IT ಅಧಿಕಾರಿಗಳು ದಾಳಿ ನಡಸಿದ್ದು, ಏಕಕಾಲಕ್ಕೆ ಬೆಂಗಳೂರು, ಮೈಸೂರು, ಮಂಡ್ಯ ಇಲವಾಲ ಸೇರಿ 30ಕ್ಕೂ ಹೆಚ್ಚು ಕಡೆ ಬೃಹತ್ ರೇಡ್ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಬೆಳಗ್ಗೆ ಐದು ಗಂಟೆ ಸುಮಾರಿಗೆ ದಾಳಿ ಮಾಡಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ವಾಹನಗಳನ್ನ ಮದುವೆಗೆ ಹೋಗುವಂತೆ ಸಿಂಗರಿಸಿಕೊಂಡು ತೆರಳಿ ರೇಡ್ ನಡೆಸಿದ್ದು, ಮಾಹಿತಿ ಸೋರಿಕೆ ಆಗಬಹುದು ಎಂಬ ಕಾರಣಕ್ಕೆ ಈ ರೀತಿಯಾಗಿ ದಾಳಿ ಮಾಡಿದ್ದಾರೆ.
ಇನ್ನು IT ಅಧಿಕಾರಿಗಳು ರೇಡ್ಗಾಗಿ ಸುಮಾರು 90 ಇನೋವಾ ಕಾರುಗಳನ್ನು ಬಳಕೆ ಮಾಡಿದ್ದಾರೆ. ಉದ್ಯಮಿಗಳು, ಬಿಲ್ಡರ್ಸ್ಗಳು ಆದಾಯ ತೆರಿಗೆ ವಂಚನೆ ಮಾಡಿರುವ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದ್ದು, ಚೆನ್ನೈ, ದೆಹಲಿ, ಮುಂಬೈನಿಂದಲೂ ಬಂದಿರುವ IT ಅಧಿಕಾರಿಗಳು ಉದ್ಯಮಿಗಳು-ಬಿಲ್ಡರ್ಸ್ಗಳಿಗೆ ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ.
ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ…
Author: Btv Kannada
Post Views: 17









