ದೆಹಲಿ ಎಕ್ಸಿಟ್ ಪೋಲ್ – 27 ವರ್ಷಗಳ ಬಳಿಕ ದಿಲ್ಲಿಯಲ್ಲಿ ಬಿಜೆಪಿಗೆ ಅಧಿಕಾರದ ಗದ್ದುಗೆ!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತದಾನ ಅಂತ್ಯಗೊಂಡಿದ್ದು, ಇದರ ಬೆನ್ನಲ್ಲೇ ಎಕ್ಸಿಟ್ ಪೋಲ್‌ಗಳು ಹೊರಬಿದ್ದಿದೆ. ಈ ಬಾರಿ ಬಿಜೆಪಿ (BJP) ಗೆಲ್ಲಲಿದೆ ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಮ್ಯಾಟ್ರೀಜ್‌ ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿ 35 ರಿಂದ 40 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಅಂತ ಹೇಳಿದೆ. ಆಪ್‌ ಪಕ್ಷ ಕೂಡ 32 ರಿಂದ 37 ಸೀಟು ಗೆಲ್ಲುತ್ತೆ ಅಂತ ಮ್ಯಾಟ್ರೀಜ್‌ ಸಮೀಕ್ಷೆ ಹೇಳಿದೆ. ಇಬ್ಬರಿಗೂ 50 50 ಪರ್ಸೆಂಟ್‌ ಚಾನ್ಸ್‌ ಇದೆ. ಆದರೆ ಈ ಬಾರಿ ಬಿಜೆಪಿ ಆಪ್‌ ಹ್ಯಾಟ್ರಿಕ್‌ ಕನಸಿಗೆ ಕೊಳ್ಳಿ ಇಡುತ್ತೆ ಅಂತ ಈ ಸಮೀಕ್ಷೆ ನೋಡಿದರೆ ಗೊತ್ತಾಗುತ್ತೆ.

ಮ್ಯಾಟ್ರಿಜ್, ಜಿವಿಸಿ ಪೋಲ್ ಸೇರಿದಂತೆ ಪ್ರಮುಖ ಸಮೀಕ್ಷೆಗಳು ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಅಧಿಕಾರ ಹಿಡಿಯಲಿದೆ ಎನ್ನುತ್ತಿದೆ.

ಮ್ಯಾಟ್ರಿಜ್ :
ಬಿಜೆಪಿ: 35-40
ಆಪ್:32-37
ಕಾಂಗ್ರೆಸ್:01

ಜಿವಿಸಿ ಪೋಲ್ :
ಬಿಜೆಪಿ: 39-45
ಆಪ್: 22-31
ಕಾಂಗ್ರೆಸ್: 0-2
ಇತರ: 0-01

ಪಿ ಮಾರ್ಕ್ :
ಬಿಜೆಪಿ: 39-49
ಆಪ್:21-31
ಕಾಂಗ್ರೆಸ್:0-1

ಚಾಣಾಕ್ಯ ಸ್ಟಾರ್ಟರ್ಜಿ :
ಬಿಜೆಪಿ:  39-44
ಆಪ್: 25-28
ಕಾಂಗ್ರೆಸ್: 2-3

Btv Kannada
Author: Btv Kannada

Leave a Comment

Read More

01:37