‘ಬಾಯ್ಸ್ vs ಗರ್ಲ್ಸ್‌’ ಶೋನಿಂದ ಹೊರಬಂದಿದ್ದೇಕೆ? – ಕೊನೆಗೂ ಸತ್ಯ ರಿವೀಲ್ ಮಾಡಿದ ಭವ್ಯಾ ಗೌಡ!

ಕನ್ನಡದ ಜನಪ್ರಿಯ ರಿಯಾಲಿಟಿ ‘ಬಿಗ್​​ ಬಾಸ್ ಸೀಸನ್ 11’ ಮುಗಿಯುತ್ತಿದ್ದಂತೆ ವೀಕೆಂಡ್‌ನಲ್ಲಿ ಅದೇ ಸಮಯಕ್ಕೆ ‘ಬಾಯ್ಸ್‌ vs ಗರ್ಲ್ಸ್‌’ ರಿಯಾಲಿಟಿ ಶೋ ಆರಂಭವಾಗಿದ್ದು, ನಟಿ ಅನುಪಮಾ ಗೌಡ ನಿರೂಪಣೆ ಮಾಡುತ್ತಿದ್ದಾರೆ. ಈ ಹೊಸ ರಿಯಾಲಿಟಿ ಶೋನಲ್ಲಿ ಬಿಗ್ ಬಾಸ್‌ನಲ್ಲಿದ್ದ ವಿನಯ್ ಗೌಡ, ಶುಭಾ ಪೂಂಜಾ, ಮಂಜು ಪಾವಗಡ, ಐಶ್ವರ್ಯ ಶಿಂಧೋಗಿ, ಚೈತ್ರಾ ಕುಂದಾಪುರ, ಶೋಭಾ ಶೆಟ್ಟಿ, ರಜತ್ ಕಿಶನ್, ಹನುಮಂತು, ಧನರಾಜ್ ಆಚಾರ್ ಸೇರಿದಂತೆ ದೊಡ್ಡ ತಂಡವಿದೆ. ಸದ್ಯ ಈ ಶೋಗೆ ಭವ್ಯಾ ಗೌಡ ಬರದ ಕಾರಣ ಚೈತ್ರಾ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ ಭವ್ಯಾ ಯಾಕೆ ಬಂದಿಲ್ಲ ಎಂದು ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.

‘ಬಾಯ್ಸ್‌ vs ಗರ್ಲ್ಸ್‌’ ಶೋ ಶೂಟಿಂಗ್ ಶುರುವಾಗುವ ಮುನ್ನವೇ ನನಗೆ ಆರೋಗ್ಯ ಸಮಸ್ಯೆ ಆಯ್ತು. ಹಾಗಾಗಿ ನಾನು ಹೋಗಲಿಲ್ಲ. ಬಿಗ್​ಬಾಸ್ ಶೋನಿಂದ ನಮ್ಮ ಮನೆಗೆ ಬಂದ ಮೇಲೆ ನನಗೆ ತುಂಬಾ ಜ್ವರ, ಕೆಮ್ಮು ಮತ್ತು ಶೀತ ಶುರುವಾಗಿತ್ತು. ಆರೋಗ್ಯ ಸರಿಯಾಗಿರಲಿಲ್ಲ. ಇದೇ ಸಮಯಕ್ಕೆ ‘ಬಾಯ್ಸ್‌ vs ಗರ್ಲ್ಸ್‌’ ರಿಯಾಲಿಟಿ ಶೋ ಶೂಟಿಂಗ್ ಶುರು ಮಾಡಿದ್ದರು. ನನಗೆ ಹುಷಾರಿಲ್ಲದ ಕಾರಣ ನಾನು ಆ ಶೂಟಿಂಗ್‌ನಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ’ ಎಂದು ಖಾಸಗಿ ಸಂದರ್ಶನದಲ್ಲಿ ಭವ್ಯಾ ಗೌಡ ಮಾತನಾಡಿದ್ದಾರೆ. 

‘ನಾನು ಬಾಯ್ಸ್‌ vs ಗರ್ಲ್ಸ್‌ ರಿಯಾಲಿಟಿ ಶೋನಲ್ಲಿ ಭಾಗಿಯಾಗದೇ ಇರುವುದಕ್ಕೆ ಆರೋಗ್ಯ ಸಮಸ್ಯೆ ಅಷ್ಟೇ ಕಾರಣ ಹೊರತು ಬೇರೇ ಏನೂ ಅಲ್ಲ. ಅಲ್ಲದೆ ನಾನು ಕೂಡ ಆ ಶೋನಲ್ಲಿ ಭಾಗಿಯಾಗಬೇಕು ಅಂತ ತುಂಬಾ ಟ್ರೈ ಮಾಡಿದ್ದೀನಿ. ಬಿಗ್​ಬಾಸ್ ಮನೆಯಲ್ಲಿ ಫಿನಾಲೆ ವಾರದಲ್ಲಿ ಇರುವಾಗಲೇ ಅಂತಹದ್ದೊಂದು ಅವಕಾಶ ಹುಡುಕಿ ಬಂದಾಗ ಯಾರು ಬೇಡ ಅಂತ ಹೇಳುತ್ತಾರೆ? ಯಾರು ಮಿಸ್ ಮಾಡಿಕೊಳ್ಳುವುದ್ದಕ್ಕೆ ಇಷ್ಟ ಪಡುತ್ತಾರೆ? ಈಗ ಮಿಸ್ ಆಗಿದೆ. ಪರ್ವಾಗಿಲ್ಲ ಮುಂದೆ ಬೇರೆಯದ್ದು ಮಾಡೋಣ ಬಿಡು ಅಂತ ನಾನೇ ಸುಮ್ನಾದೆ’ ಎಂದು ಭವ್ಯಾ ಗೌಡ ಹೇಳಿದ್ದಾರೆ. 

Btv Kannada
Author: Btv Kannada

Leave a Comment

Read More

Read More

21:18