ಬಿಟ್ ಕಾಯಿನ್ ಕೇಸಲ್ಲಿ ಶ್ರೀಕಿ ಜೊತೆ ಅವ್ಯವಹಾರ ಆರೋಪ – ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್​ಗೆ SIT ನೋಟಿಸ್!

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ ಬಿಟ್ ಕಾಯಿನ್ ಕೇಸ್​​ನಲ್ಲಿ ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್​ಗೆ ಸಂಕಷ್ಟ ಎದುರಾಗಿದೆ. ಬಿಟ್​ಕಾಯಿನ್ ಕೇಸ್‌ನ ಪ್ರಮುಖ ಆರೋಪಿಯಾದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜೊತೆ ಅವ್ಯವಹಾರ ಆರೋಪ ಸಂಬಂಧ ಮೊಹಮ್ಮದ್ ನಲಪಾಡ್​ಗೆ SIT ಅಧಿಕಾರಿಗಳು ನೋಟಿಸ್ ಶಾಕ್ ಕೊಟ್ಟಿದ್ದಾರೆ.

ಈ ಪ್ರಕರಣ ಸಂಬಂಧ ಫೆ. 7 ರಂದು ವಿಚಾರಣೆಗೆ ಹಾಜರಾಗಲು ಮೊಹಮ್ಮದ್ ನಲಪಾಡ್​ಗೆ SIT ನೋಟಿಸ್ ನೀಡಿದೆ. ಈ ಹಿಂದೆ ಸಿಐಡಿ ಕಚೇರಿಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅವರನ್ನು ವಿಚಾರಣೆ ಮಾಡಲಾಗಿತ್ತು. ಹೇಳಿಕೆ ದಾಖಲು ಮಾಡಿಕೊಂಡ ಬಳಿಕ ಪ್ರಕರಣದಲ್ಲಿ ನಲಪಾಡ್ ಅವರನ್ನೂ ಆರೋಪಿಯನ್ನಾಗಿ ಮಾಡಲಾಗಿದೆ.

ಈ ಹಿಂದೆ ಬಿಟ್​ಕಾಯಿನ್ ಕೇಸ್‌ನ ಪ್ರಮುಖ ಆರೋಪಿಯಾದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಗೆ ನಲಪಾಡ್ ಆಪ್ತನಾಗಿದ್ದ ಎನ್ನುವ ಕಾರಣಕ್ಕೆ ಬೆಂಗಳೂರಿನ ಕಾಟನ್​ಪೇಟೆ ಹ್ಯಾಕಿಂಗ್ ಕೇಸ್​ನಲ್ಲಿ ಶ್ರೀಕಿ ಜೊತೆ ವ್ಯವಹಾರಿಕ ಸಂಬಂಧದ ಅನುಮಾನದಲ್ಲಿ ವಿಚಾರಣೆ ನಡೆಸಲಾಗಿತ್ತು ಆದ್ರೆ ಇದೀಗ ನಲಪಾಡ್ ಆರೋಪಿ ಎಂದು ಎಸ್‌ಐಟಿ ಹೇಳಿದೆ.

Btv Kannada
Author: Btv Kannada

Leave a Comment

Read More

01:36