ಟಾಲಿವುಡ್ ಸ್ಟಾರ್ ನಟಿ ಸಮಂತಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಇತ್ತೀಚೆಗೆ ನಟಿ ಸಮಂತಾ ಹೆಸರು ಖ್ಯಾತ ನಿರ್ದೇಶಕ ರಾಜ್ ನಿಡಿಮೂರು ಜೊತೆ ಹಲವು ಬಾರಿ ಥಳುಕುಹಾಕಿಕೊಂಡಿತ್ತು. ಪಿಕಲ್ಬಾಲ್ ಲೀಗ್ನಲ್ಲಿ ಇಬ್ಬರೂ ಕೈ ಕೈ ಹಿಡಿದುಕೊಂಡಿದ್ದ ಫೋಟೋಗಳು ಸಖತ್ ವೈರಲ್ ಆಗಿತ್ತು. ಹಾಗಾಗಿ ಸಮಂತಾ ರಾಜ್ ಜೊತೆ ಡೇಟಿಂಗ್ ಮಾಡಲು ಶುರು ಮಾಡಿದ್ದಾರೆ ಅನ್ನೋ ವದಂತಿ ಕೂಡ ಹರಿದಾಡಿತ್ತು.
ಆದ್ರೆ ಇದೀಗ ಮತ್ತೊಂದು ಹೊಸ ಫೋಟೋದಲ್ಲಿ ಕಾಣಿಸಿಕೊಳ್ಳುವ ಮೂಲಕ ಸ್ಯಾಮ್ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಹೌದು, ನಟಿ ಸಮಂತ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಸಮಂತಾ ವಿಭಿನ್ನವಾದ ಹೇರ್‌ಸ್ಟೈಲ್‌ನೊಂದಿಗೆ ಫೋಟೋಶೂಟ್ ಮಾಡಿಸಿ ಶಾಕ್ ಕೊಟ್ಟಿದ್ದಾರೆ. ಇನ್ನೂ ನಟಿಯ ದಿಢೀರ್ ಬದಲಾವಣೆಗೆ ಕಾರಣವೇನು ಅಂತ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.

ಆರೋಗ್ಯ ಸಮಸ್ಯೆಯಿಂದಾಗಿ ಸಿನಿಮಾರಂಗದಿಂದ ದೂರವಾಗಿದ್ದ ಸಮಂತಾ ಈಗ ಮತ್ತೆ ಸಿನಿಮಾಗಳಲ್ಲಿ ನಟಿಸಲು ಶುರುಮಾಡಿದ್ದಾರೆ. ಸಮಂತಾ ಬಾಲಿವುಡ್‌ನಲ್ಲಿ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ನಡುವೆ ನಟಿ ಸಮಂತಾ ಅಚ್ಚರಿಯ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.
ಚಿಕ್ಕ ಕೂದಲಿನೊಂದಿಗೆ ಪುರುಷನಂತೆ ಕಾಣಿಸಿಕೊಂಡಿದ್ದಾರೆ. ಆದ್ರೆ ಈ ಹೊಸ ಲುಕ್ ಸಿನಿಮಾಗಾಗಿ ಅಲ್ಲ, ಪ್ರಸಿದ್ಧ ಹಾಲಿವುಡ್ ಪತ್ರಿಕೆಯ ಮುಖಪುಟಕ್ಕಾಗಿ ಸಮಂತಾ ಹೀಗೆ ಬದಲಾಗಿದ್ದಾರೆ ಎನ್ನಲಾಗಿದೆ. ಹಾಲಿವುಡ್‌ನಲ್ಲಿ ಅವಕಾಶಗಳನ್ನು ಪಡೆಯಲು ಹೀಗೆ ಫೋಟೋಶೂಟ್ ಮಾಡಿಸಿದ್ದಾರೆ ಎನ್ನಲಾಗಿದೆ. ಸಮಂತಾ ಅವರ ಈ ಫೋಟೋಶೂಟ್ ನೋಡಿದ ನೆಟ್ಟಿಗರು ಅವರಿಗೆ ಏನಾಯ್ತು ಎಂದು ಪ್ರಶ್ನಿಸುತ್ತಿದ್ದಾರೆ.
