Download Our App

Follow us

Home » ರಾಜಕೀಯ » ರಾಣಿ ಚೆನ್ನಮ್ಮ ವಿಜಯೋತ್ಸವಕ್ಕೆ 200 ವರ್ಷ – ಮೋದಿ ಸರ್ಕಾರದಿಂದ ‘ಅಂಚೆ ಚೀಟಿ’ ಗೌರವ..!

ರಾಣಿ ಚೆನ್ನಮ್ಮ ವಿಜಯೋತ್ಸವಕ್ಕೆ 200 ವರ್ಷ – ಮೋದಿ ಸರ್ಕಾರದಿಂದ ‘ಅಂಚೆ ಚೀಟಿ’ ಗೌರವ..!

ನವದೆಹಲಿ : ಬ್ರಿಟಿಷರ ವಿರುದ್ಧ ಹೋರಾಡಿ ಜಯ ಸಾಧಿಸಿದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ವಿಜಯೋತ್ಸವಕ್ಕೆ 200 ವರ್ಷ ಪೂರ್ಣವಾಗುತ್ತಿದೆ. ಈ ಐತಿಹಾಸಿಕ ವಿಜಯದ ಜ್ಞಾಪಕಾರ್ಥವಾಗಿ ರಾಣಿ ಚೆನ್ನಮ್ಮನವರ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವಂತೆ ಕಿತ್ತೂರು ಕರ್ನಾಟಕ ನಿಯೋಗ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಹಾಗಾಗಿ ರಾಣಿ ಚೆನ್ನಮ್ಮನವರ ಅಂಚೆ ಚೀಟಿಯನ್ನು ಇದೇ ಅಕ್ಟೋಬರ್ 23ಕ್ಕೆ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದೇ ಅಕ್ಟೋಬರ್ 23 ಕ್ಕೆ, ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮನವರು ಬ್ರಿಟಿಷರ ವಿರುದ್ಧ ಸಾರಿದ ಸಂಗ್ರಾಮದ ವಿಜಯಕ್ಕೆ 200 ವರ್ಷ ಸಂದಲಿದೆ. ಈ ಐತಿಹಾಸಿಕ ವಿಜಯದ ಜ್ಞಾಪಕಾರ್ಥವಾಗಿ ರಾಣಿ ಚೆನ್ನಮ್ಮನವರ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವಂತೆ ಕಿತ್ತೂರು ಕರ್ನಾಟಕ ನಿಯೋಗದ ಪ್ರಮುಖರು, ರಾಜ್ಯಸಭಾ ಸಂಸದರಾದ ಈರಣ್ಣ ಕಡಾಡಿ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಅರವಿಂದ್ ಬೆಲ್ಲದ್, ಅಭಯ್ ಪಾಟೀಲ್, ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಹಾಗೂ ಪ್ರಮುಖರೊಂದಿಗೆ ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಅವರಲ್ಲಿ ಇದೇ 16.10.2024 ರಂದು ಆಗ್ರಹಿಸಲಾಗಿತ್ತು. ತಕ್ಷಣವೇ ರಾಣಿ ಚೆನ್ನಮ್ಮನ ಅಂಚೆ ಚೀಟಿಯನ್ನು ಇದೇ ಅಕ್ಟೋಬರ್ 23ಕ್ಕೆ ಬಿಡುಗಡೆ ಮಾಡಲು ಭಾರತ ಸರ್ಕಾರ ನಿರ್ಧರಿಸಿದೆ. ಮೋದಿ ಸರ್ಕಾರದ ತ್ವರಿತ ನಿರ್ಧಾರ ಹಾಗೂ ಕಾರ್ಯರೂಪಕ್ಕೆ ಇದು ಕೈಗನ್ನಡಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪೋಸ್ಟ್ ಮಾಡಿದ್ದಾರೆ.

 

ಇದು ಭಾರತ ಸರ್ಕಾರವು ರಾಣಿ ಚೆನ್ನಮ್ಮನಿಗೆ ಸಲ್ಲಿಸುತ್ತಿರುವ ಗೌರವ. ಈ ತ್ವರಿತ ನಿರ್ಧಾರ ಕೈಗೊಂಡ ಪ್ರಧಾನಮಂತ್ರಿ, ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ  ಹಾಗೂ ಕೇಂದ್ರ ಸಂವಹನಾ ಸಚಿವಾಲಯಕ್ಕೆ ಹೃತ್ಪೂರ್ವಕ ಧನ್ಯವಾದಗಳು ಎಂದು ಪ್ರಹ್ಲಾದ್ ಜೋಶಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ

ಇದನ್ನೂ ಓದಿ : ನಿಶ್ಚಿತಾರ್ಥ ಮಾಡಿಕೊಂಡ ಕಿರುತೆರೆ ನಟಿ ಮಾನ್ಸಿ ಜೋಶಿ – ಹುಡುಗ ಯಾರು?

Leave a Comment

DG Ad

RELATED LATEST NEWS

Top Headlines

ರೋಮ್ಯಾನ್ಸ್ ಸೀನ್​ ಶೂಟಿಂಗ್ ಮಾಡುವಾಗ ಕಂಟ್ರೋಲ್ ತಪ್ಪಿದ್ರಾ ವರುಣ್ ಧವನ್ ? – ನಟಿ ಜೊತೆಗಿನ ಹಾಟ್​ ವಿಡಿಯೋ ಲೀಕ್​!

ಮುಂಬೈ : ಬಾಲಿವುಡ್​ನಲ್ಲಿ ಯಂಗ್ ಹೀರೋ ಆಗಿ ಗುರುತಿಸಿಕೊಂಡಿರುವ ನಟ ವರುಣ್ ಧವನ್ ಸಿನಿಮಾದ ರೋಮ್ಯಾನ್ಸ್ ಸೀನ್​ ಶೂಟಿಂಗ್ ವೇಳೆ ಕಂಟ್ರೋಲ್ ತಪ್ಪಿದ್ರಾ ಎಂಬ ಚರ್ಚೆಗಳು ಶುರುವಾಗಿವೆ. ನಟ

Live Cricket

Add Your Heading Text Here