ಬೆಂಗಳೂರು : ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್ಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. 2017-18ರಲ್ಲಿ ಸೌಂದರ್ಯ ಜಗದೀಶ್ ಅವರು ಪವಿತ್ರಾಗೌಡ ಅಕೌಂಟ್ಗೆ 2 ಕೋಟಿ ಹಣ ಟ್ರಾನ್ಸ್ಫರ್ ಮಾಡಿದ್ದರು. ಪವಿತ್ರ ಮನೆ ಖರೀದಿ ಪತ್ರದಲ್ಲಿ ಸೌಂದರ್ಯ ಜಗದೀಶ್ ಸಾಕ್ಷಿಯಾಗಿಯೂ ಸಹಿ ಹಾಕಿದ್ದರು. ದರ್ಶನ್ ಕೇಸ್ ಎನ್ಕ್ವೈರಿ ವೇಳೆ ಅಕೌಂಟ್ ಡೀಟೇಲ್ಸ್ ನ್ನು ಪರಿಶೀಲನೆ ಮಾಡಿದ್ದು, ಈ ವೇಳೆ ಪೊಲೀಸರಿಗೆ ಹಣದ ವ್ಯವಹಾರ ಮಾಡಿರೋ ಮಾಹಿತಿ ಲಭ್ಯವಾಗಿದೆ. ಸೌಂದರ್ಯ ಜಗದೀಶ್ ಆತ್ಮಹತ್ಯೆ ಬಳಿಕ ಪತ್ನಿ ರೇಖಾಪಾಲುದಾರರಿಂದ ಹಣಕಾಸಿನ ವಂಚನೆ ಆಗಿದೆ ಎಂದು ದೂರು ನೀಡಿದ್ದರು.
ಪಾಲುದಾರರಿಂದ 60 ಕೋಟಿ ನಷ್ಟ ಎಂದು ಜಗದೀಶ್ ಪತ್ನಿ ರೇಖಾ ದೂರು ನೀಡಿದ್ದರು. ರೇಖಾ ಜಗದೀಶ್ ದೂರಿನ ಬೆನ್ನಲ್ಲೇ ಪಾಲುದಾರರು ಅಲರ್ಟ್ ಆಗಿದ್ದು, ಪಾಲುದಾರ ಸುರೇಶ್ ವ್ಯವಹಾರದ ದಾಖಲೆ ಪೊಲೀಸರಿಗೆ ನೀಡಿದ್ದರು. ಪಾಲುದಾರರಿಗೆ ಸಿಕ್ಕ ದಾಖಲೆಯಲ್ಲಿ ದರ್ಶನ್- ಪವಿತ್ರಾ, ಜಗದೀಶ್ ವ್ಯವಹಾರ ಪತ್ತೆಯಾಗಿದೆ. ಸೌಂದರ್ಯ ಜಗದೀಶ್ ಹಣ ಕೊಟ್ಟ ಮಾರನೇ ದಿನವೇ ಪವಿತ್ರಾ ಮನೆ ಖರೀದಿ ಮಾಡಿದ್ದಾರೆ. 2017 ನವೆಂಬರ್ 13 ರಂದು ಪವಿತ್ರಾಗೌಡಗೆ 1 ಕೋಟಿ ರೂ. ವರ್ಗಾವಣೆಯಾಗಿದ್ದು, 2018 ಜನವರಿ 23 ರಂದು ಪವಿತ್ರಾಗೌಡಗೆ ಮತ್ತೆ 1 ಕೋಟಿ ರೂ. ವರ್ಗಾವಣೆಯಾಗಿದೆ.
ನಂತರ ದರ್ಶನ್ ಗೆಳತಿ ಪವಿತ್ರಾಗೌಡ 2018, ಜನವರಿ 24 ರಂದು RR ನಗರ ಬಳಿಯ ಕೆಂಚನಹಳ್ಳಿಯಲ್ಲಿ 1. 75 ಲಕ್ಷ ಮೌಲ್ಯದ ಮನೆ ಖರೀದಿಸಿದ್ದರು. ಪವಿತ್ರಾಗೌಡ ಮನೆ ಖರೀದಿ ಪತ್ರದಲ್ಲಿ ಸಾಕ್ಷಿಯಾಗಿ ಸೌಂದರ್ಯ ಜಗದೀಶ್ ಸಹಿಯಿದೆ. ಪವಿತ್ರಾಗೌಡಗೆ ಸೌಂದರ್ಯ ಜಗದೀಶ್ ಹಣ ಕೊಟ್ಟ ದಾಖಲೆ ಮಾತ್ರ ಲಭ್ಯವಾಗಿದ್ದು, ಈವರೆಗೂ ಪವಿತ್ರಾಗೌಡ ಸೌಂದರ್ಯ ಜಗದೀಶ್ಗೆ ಹಣ ವಾಪಸ್ ನೀಡಲಿಲ್ಲ. ದರ್ಶನ್ ಒತ್ತಡದಿಂದಲೇ ಸೌಂದರ್ಯ ಜಗದೀಶ್ ಹಣ ಕೊಟ್ಟಿದ್ದರೆಂಬ ಅನುಮಾನ ಇದೀಗ ಹುಟ್ಟಿಕೊಂಡಿದ್ದು, ದರ್ಶನ್ ಒತ್ತಡದ ಅನುಮಾನದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಸಿದ್ದು ಸರ್ಕಾರ ಉರುಳಿಸೋಕೆ ಕಾಂಗ್ರೆಸ್ನಲ್ಲೇ ಟೀಂ ರೆಡಿ : ಕುಮಾರಸ್ವಾಮಿನ ಮೀಟ್ ಮಾಡಿದ್ರಾ 40 ಕೈ ಶಾಸಕರು?!