ಬೆಂಗಳೂರು : ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹಮ್ಮದ್ ವಿಚಾರಣೆಗೆ ಹಾಜರಾಗಿದ್ದಾರೆ. 4ನೇ ನೋಟಿಸ್ ನಂತರ ಸಚಿವ ಜಮೀರ್ ಲೋಕಾಯುಕ್ತ ಕಚೇರಿಗೆ ಆಗಮಿಸಿದ್ದಾರೆ.
ಜಮೀರ್ ಅಹ್ಮದ್ ಖಾನ್ ವಿರುದ್ಧ ACBಯಲ್ಲಿ ದೂರು ದಾಖಲಾಗಿತ್ತು. ACB ರದ್ದು ನಂತರ ಕೇಸ್ ಲೋಕಾಯುಕ್ತಕ್ಕೆ ವರ್ಗಾವಣೆಯಾಗಿತ್ತು. ACBಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಈಗ ಲೋಕಾಯುಕ್ತದಲ್ಲಿ ವಿಚಾರಣೆ ನಡೆಯಲಿದೆ. ಈ ಹಿಂದೆ ಜಮೀರ್ ಅಹ್ಮದ್ ಮನೆ ಮೇಲೆ ACB ರೇಡ್ ಮಾಡಿತ್ತು. ಜಮೀರ್ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಿದ್ದರು.
ರೇಡ್ ವೇಳೆ ACB ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದು, ಆದಾಯ ಮೀರಿದ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದೆ. ನಂತರ ರಾಜ್ಯ ಸರ್ಕಾರ ಎಸಿಬಿ ರದ್ದು ಮಾಡಿ ಆದೇಶಿಸಿತ್ತು. ಅದೇ ಪ್ರಕರಣದ ವಿಚಾರಣೆಯನ್ನು ಲೋಕಾಯುಕ್ತ ಮುಂದುವರೆಸಿದೆ.
ಇದನ್ನೂ ಓದಿ : ನನಗೆ ನಿರ್ಮಾಪಕ ಅಪ್ಪನಂತಿದ್ದರೆ ನಿರ್ದೇಶಕ ಅಮ್ಮನಂತೆ – ಹಿರಿಯ ನಟಿ ತಾರಾ..!
Post Views: 24