ಬಾಗಲಕೋಟೆ : ಪ್ರಿಯಕರ ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. 19 ವರ್ಷದ ರುಕ್ಕವ್ವ ವಡವಾಣಿ ಆತ್ಮಹತ್ಯೆಗೆ ಶರಣಾದ ಯುವತಿ.
ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಪೋಷಕರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಶಂಕ್ರಪ್ಪ ಪತ್ತಾರ ಎನ್ನುವ ಯುವಕ ಮದುವೆಗೆ ನಿರಾಕರಿಸಿದ್ದು, ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು.
ಈ ಬಗ್ಗೆ ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ 1 ತಿಂಗಳು ಕಳೆದ್ರೂ ಪೊಲೀಸರು ಆರೋಪಿಗಳನ್ನ ಬಂಧಿಸಿಲ್ಲ. ಶಂಕ್ರಪ್ಪ ಸದ್ಯ ನಿರೀಕ್ಷಣಾ ಜಾಮೀನು ಪಡೆದಿದ್ದು ಮಗಳ ಸಾವಿಗೆ ಶಂಕ್ರಪ್ಪನೇ ನೇರ ಕಾರಣ ಎಂದು ಯುವತಿ ಪೋಷಕರು ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ : ಹೊಸ ಲುಕ್ನಲ್ಲಿ ಸಾನ್ಯಾ ಅಯ್ಯರ್ ಮಸ್ತ್ ಫೋಟೋಶೂಟ್ – ಗುರುತೇ ಸಿಗದಷ್ಟು ಬದಲಾದ ನಟಿ..!
Post Views: 635