ಬೆಂಗಳೂರು : ನಾಲ್ಕು ಅಂತಸ್ತಿನ ಬಿಲ್ಡಿಂಗ್ ಮೇಲೆ ನಿಂತು ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಶೇಷಾದ್ರಿಪುರಂನಲ್ಲಿ ನಡೆದಿದೆ. ಶೇಷಾದ್ರಿಪುರಂ ಕಾಲೇಜು ಹಿಂಭಾಗದಲ್ಲಿರುವ ನಿರ್ಮಾಣ ಹಂತದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಮಂಜು ಎಂಬ ಯುವಕ ನಾನು ತುಂಬಾ ಚೆನ್ನಾಗಿ ಓದುತ್ತಿದೆ, ನನ್ನನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಿದ್ದರು. ನಾನು ಇಲ್ಲಿಂದ ಹಾರಿ ಸಾಯ್ತೀನಿ ಎಂದಿದ್ದಾನೆ. ಸ್ಥಳಕ್ಕೆ ಶೇಷಾದ್ರಿಪುರಂ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.
ಪೊಲೀಸರು ಯುವಕನನ್ನು ಮನವೊಲಿಸುವ ಸಾಹಸ ಮಾಡಿದ್ದಾರೆ. ಅಗ್ನಿಶಾಮಕ ದಳ ಕರೆಸಿ ಯುವಕನ ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಯುವಕ ಮಂಜು ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದ.
ಇದನ್ನೂ ಓದಿ : BMTC ಬಸ್-ಕಾರ್ ನಡುವೆ ಡಿಕ್ಕಿ : ಮಹಿಳೆಗೆ ಗಂಭೀರ ಗಾಯ..!
Post Views: 62