ಮೈಸೂರು : ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ಸಂಘರ್ಷ ತಾರಕಕ್ಕೇರಿದೆ. ಇದೀಗ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಯತ್ನಾಳ್ ಟೀಂ ವಿರುದ್ಧ ಬಿ.ಸಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ಜಗ್ಗಲ್ಲ..ಬಗ್ಗಲ್ಲ ಎಂದವರೆಲ್ಲಾ ಬಿಜೆಪಿಯಲ್ಲಿ ಏನಾದ್ರು, ಠೇವಣಿ ಕಳೆದುಕೊಂಡು ಮನೆಯಲ್ಲಿ ಕೂತಿದ್ದಾರೆ. ಹೊರಗಿನ ಶತ್ರುಗಳಾಗಿದ್ರೆ ಒಂದೇ ಬಾರಿಗೆ ಕೊಚ್ಚಿ ಹಾಕಬಹುದಿತ್ತು,
ಇದು ಒಳಗಿನ ಶತ್ರುಗಳ ಕೆಲಸ, ಕಾದು ಸದೆ ಬಡೀತಾರೆ ಎಂದು ಕಿಡಿ ಕಾರಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಬಿ.ಸಿ ಪಾಟೀಲ್ ಮಾತನಾಡಿ, ನಾಯಕ ಅಂತಾ ಬಾಯಿ ಮಾತಿಗೆ ಯತ್ನಾಳ್ ಹೇಳ್ತಿದ್ದಾರೆ. ಯತ್ನಾಳ್ ಹಿಂದೆ ಯಾವ ಶಾಸಕರಿದ್ದಾರೆ, ಯಾವ ಮುಖಂಡ ಇದ್ದಾರೆ. ಯಡಿಯೂರಪ್ಪ ಅವರನ್ನು ಟೀಕಿಸಿದ್ರೆ ಯತ್ನಾಳ್ಗೆ ಪ್ರಚಾರ ಸಿಗುತ್ತೆ, ಹೀಗಾಗಿ ಯಡಿಯೂರಪ್ಪ ಅವರನ್ನು ಟೀಕಿಸಿ ಪ್ರಚಾರ ಪಡೀತಿದ್ದಾರೆ ಎಂದಿದ್ದಾರೆ.
ಎಂತೆಂಥವರೋ ತೊಡೆತಟ್ಟಿ ಮೀಸೆ ಮಣ್ಣು ಮಾಡಿಕೊಂಡರು, ಇವರದ್ದೂ ಅದೇ ಸ್ಥಿತಿ ಆಗುತ್ತೆ, ಈಗ್ಲಾದ್ರೂ ಎಚ್ಚೆತ್ತುಕೊಳ್ಳಲಿ ಎಂದು ಬಿಎಸ್ವೈ ಬೆಂಬಲಿಗ ಬಿ.ಸಿ.ಪಾಟೀಲ್ ಕೆಂಡ ಕಾರಿದ್ದಾರೆ.
ಇದನ್ನೂ ಓದಿ : ಮಂಡ್ಯ ಆಯ್ತು ರಾಮನಗರ ಮುಗೀತು.. ಈಗ ಹಾಸನದಲ್ಲಿ ನಿಖಿಲ್ ಹವಾ..!