ಟಾಲಿವುಡ್ನ ಸ್ಟಾರ್ ಹೀರೋ ಬಾಲಯ್ಯ ಅವರಿಗೆ ಲಾಂಗ್ ಫಿಲ್ಮ್ ಜರ್ನಿ ಇದೆ. ಸಾಕಷ್ಟು ಹಿಟ್, ಬ್ಲಾಕ್ ಬಸ್ಟರ್ ಕೊಟ್ಟಿರುವ ಬಾಲಯ್ಯ ಕೆರಿಯರ್ ಸಕ್ಸಸ್ ಫುಲ್ ಆಗಿ ಸಾಗ್ತಿದೆ. ಸದ್ಯ ವಾಲ್ತೇರು ವೀರಯ್ಯ ಫೇಮ್ ಡೈರೆಕ್ಟರ್ ಬಾಬಿ ಜೊತೆ ‘ಡಾಕು ಮಹಾರಾಜ’ ಸಿನಿಮಾವನ್ನು ಬಾಲಯ್ಯ ಅವರು ಮಾಡ್ತಿದ್ದಾರೆ. ಈ ಸಿನಿಮಾ ಸಂಕ್ರಾಂತಿಗೆ ರಿಲೀಸ್ ಆಗಲಿದೆ.
ಇದೀಗ ನಟ ಬಾಲಯ್ಯ ಜೊತೆ ಮಾಡಿದ್ದ ಸಿನಿಮಾ ಇಷ್ಟ ಆಗಿಲ್ಲ ಅಂತ ಸ್ಟಾರ್ ಹೀರೋಯಿನ್ ಅನುಷ್ಕ ಶೆಟ್ಟಿ ಅವರು ಓಪನ್ ಆಗಿ ಮಾತನಾಡಿದ್ದಾರೆ. ಕನ್ನಡದ ಹುಡುಗಿ ಅನುಷ್ಕ ಶೆಟ್ಟಿ ಬಾಲಯ್ಯ ಜೊತೆ ಒಂದೇ ಒಂದು ಸಿನಿಮಾ ಮಾಡಿದ್ದಾರೆ. ಅದು ‘ಒಕ್ಕ ಮಗಾಡು’. ಈ ಸಿನಿಮಾ ತನಗೆ ಇಷ್ಟ ಆಗಿಲ್ಲ ಅಂತ ಅನುಷ್ಕ ಹೇಳಿದ್ದಾರೆ.
ಜಯಪ್ರದ ಟಾಕ್ ಶೋನಲ್ಲಿ ಭಾಗವಹಿಸಿದ್ದ ವೇಳೆ ಅನುಷ್ಕಾ ಶೆಟ್ಟಿ ಅವರನ್ನ ಜಯಪ್ರದ ಕೆಲವು ಪ್ರಶ್ನೆ ಕೇಳಿದ್ರು. ನಿಮ್ಮ ಕೆರಿಯರ್ನಲ್ಲಿ ಇಷ್ಟ ಆಗದ ಸಿನಿಮಾ ಯಾವುದು ಅಂತ ಕೇಳಿದಾಗ ಅನುಷ್ಕಾ ಶೆಟ್ಟಿ ‘ಒಕ್ಕ ಮಗಾಡು’ ಅಂತ ಹೇಳಿದ್ದಾರೆ.
‘ಒಕ್ಕ ಮಗಾಡು’ ಫ್ಲಾಪ್ ಸಿನಿಮಾ. ಭಾರತೀಯ ಸಿನಿಮಾ ಇನ್ಸ್ಪಿರೇಷನ್ನಿಂದ ಮಾಡಿದ್ದ ಈ ಸಿನಿಮಾಗೆ ಒಳ್ಳೆ ವಿಮರ್ಶೆ ಸಿಕ್ಕಿಲ್ಲ. ಹಾಗಾಗಿ ಅನುಷ್ಕಾ ಶೆಟ್ಟಿ ‘ಒಕ್ಕ ಮಗಾಡು’ ತನ್ನ ಕೆರಿಯರ್ನ ಕೆಟ್ಟ ಸಿನಿಮಾ ಅಂತ ಪರೋಕ್ಷವಾಗಿ ಹೇಳಿದ್ದಾರೆ.
‘ಅರುಂಧತಿ’ ಅನುಷ್ಕ ಕೆರಿಯರ್ಗೆ ಟರ್ನಿಂಗ್ ಪಾಯಿಂಟ್ ಸಿನಿಮಾ. ಆ ಸಿನಿಮಾ ಅನುಷ್ಕಾ ಶೆಟ್ಟಿಗೆ ಒಳ್ಳೆ ಹೆಸರು ತಂದುಕೊಟ್ಟಿತು. ಬಾಹುಬಲಿ ಸಿನಿಮಾದಿಂದ ಅನುಷ್ಕ ಪ್ಯಾನ್ ಇಂಡಿಯಾ ಫೇಮ್ ಪಡೆದರು. ಸದ್ಯ ಡೈರೆಕ್ಟರ್ ಕ್ರಿಷ್ ಜೊತೆ ಘಾಟಿ ಸಿನಿಮಾ ಮಾಡ್ತಿದ್ದಾರೆ.
ಇದನ್ನೂ ಓದಿ : ರಾಜಕಾರಣಿ ಸಹೋದರಿ ಎಂದು ನಂಬಿಸಿ ಕೋಟಿ ಕೋಟಿ ವಂಚನೆ – ಖತರ್ನಾಕ್ ದಂಪತಿ ವಿರುದ್ಧ FIR..!