ಬೆಂಗಳೂರು : ಕ್ರಿಮಿನಲ್ ಮೊಕದ್ದಮೆ ದಾಖಲಿಸ್ತಾರಾ ಹಾಕಲಿ. ಈ ಸವಾಲನ್ನು ನಾನು ಸ್ವೀಕಾರ ಮಾಡ್ತೇನೆ, ಎದುರಿಸ್ತೇನೆ. ಇದು ಹೊಸ ಪರಂಪರೆ.. ಸವಾಲು ಎಂಜಾಯ್ ಮಾಡ್ತೇನೆ ಎಂದು ಕೊರೋನಾ ಕಾಲದ ಹಗರಣ ಕುರಿತ ವರದಿಗೆ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಬೆಂಗಳೂರಲ್ಲಿ ಮಾತನಾಡಿದ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಅವರು, ನಾನು ಯಾವುದೇ ಕಾನೂನು ಬಾಹಿರ ಕೆಲಸ ಮಾಡಿಲ್ಲ. ಕೊರೋನಾ ಕಾಲದಲ್ಲಿ ಅಂತಃಕರಣದಿಂದ ಶ್ರಮಿಸಿದ್ದೇನೆ. ಆಗ ನಾನು ವೈದ್ಯಕೀಯ ಸಚಿವ, ಶ್ರೀರಾಮುಲು ಆರೋಗ್ಯ ಸಚಿವ ಎಂದಿದ್ದಾರೆ.
ಇನ್ನು ಸಿಎಂ BSY ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿತ್ತು. ಯಾವುದೇ ತೀರ್ಮಾನ ಇದ್ದರೂ ಟಾಸ್ಕ್ ಫೋರ್ಸ್ ಮೂಲಕ ಆಗಿದೆ. ಹಿರಿಯ ಅಧಿಕಾರಿಗಳು, ತಜ್ಞರು ಈ ಸಮಿತಿಯಲ್ಲಿ ಇದ್ದರು. ಕೋವಿಡ್ ಕಾಲದಲ್ಲಿ 7,000 ಕೋಟಿ ಮೌಲ್ಯದಷ್ಟು ಖರೀದಿ ಆಗಿತ್ತು. ಅಕ್ರಮವೂ ಅಷ್ಟೇ ಆಗಿದೆ ಅಂದ್ರೆ ನಂಬಲು ಸಾಧ್ಯನಾ? ಸರ್ಕಾರದ ತನಿಖೆಗೆ ನನ್ನ ಸಂಪೂರ್ಣ ಸ್ವಾಗತ ಇದೆ ಎಂದು ಸುಧಾಕರ್ ತಿಳಿಸಿದ್ದಾರೆ.
ಇದನ್ನೂ ಓದಿ : ಏಕಕಾಲಕ್ಕೆ 4 ಭಾಷೆಗಳಲ್ಲಿ ಬಿಡುಗಡೆಯಾಯ್ತು ‘1990s’ ಚಿತ್ರದ ಟೀಸರ್..!