ಬಳ್ಳಾರಿ : ಬಳ್ಳಾರಿ ಸೆಂಟ್ರಲ್ ಜೈಲ್ ಮುಂದೆ ಮಹಿಳಾ ಅಭಿಮಾನಿಯೊಬ್ಬರು ಬಂದು ದರ್ಶನ್ನ ನೊಡಲೇ ಬೇಕು ಅಂತಾ ಹೈಡ್ರಾಮಾ ಮಾಡಿದ್ದಾರೆ. ಬೆಂಗಳೂರಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಹಣ್ಣು ಹಂಪಲು, ಜೊತೆಗೆ ಆಧಾರ್ ಕಾರ್ಡ್ ಹಿಡಿದು ಬಂದಿದ್ದಾರೆ. ಈ ವೇಳೆ ಜೈಲು ಸಿಬ್ಬಂದಿ ಅವರನ್ನು ತಡೆದಿದ್ದಾರೆ.
ರಕ್ತ ಸಂಬಂಧಿಗಳಿಗೆ ಮಾತ್ರ ಅವಕಾಶ ಇದೆ ಎಂದ್ರೂ ದರ್ಶನ್ ಅವರನ್ನು ನೊಡಲೇ ಬೇಕು ಅಂತಾ ಅಭಿಮಾನಿ ಹಠಕ್ಕೆ ಬಿದ್ದಿದ್ದಾರೆ. ನಾನು ದರ್ಶನ್ ಮದುವೆ ಆಗೋದಕ್ಕೂ ರೆಡಿ, ಪರಪ್ಪನ ಅಗ್ರಹಾರಕ್ಕೆ ಹೋದೆ ಅಲ್ಲೂ ಬಿಡಲಿಲ್ಲ, ಈಗ ಇಲ್ಲಿಗೆ ಬಂದಿದ್ದೇನೆ, ಹಣ್ಣು ಕೊಟ್ಟು ಹೋಗ್ತೀನಿ ಬಿಡಿ ಎಂದು ಹೈಡ್ರಾಮಾ ಮಾಡಿದ್ದಾರೆ. ಕೊನೆಗೂ ಪೊಲೀಸರು ಮಹಿಳೆಯ ಮನವೊಲಿಸಿ ವಾಪಸ್ ಕಳಿಸಿದ್ದಾರೆ.
ಇದನ್ನೂ ಓದಿ : ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಿಲನಾ ನಾಗರಾಜ್ – ತಾಯಿ ಮಗು ಕ್ಷೇಮ ಎಂದು ಡಾರ್ಲಿಂಗ್ ಕೃಷ್ಣ ಪೋಸ್ಟ್..!
Post Views: 185