ಬೆಂಗಳೂರು : ಬೈಕ್ಗೆ ಬಸ್ ಟಚ್ ಆಗಿದ್ದಕ್ಕೆ ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಬಿಎಂಟಿಸಿ ಬಸ್ ಜಾಲಹಳ್ಳಿ ಕ್ರಾಸ್ ನಿಂದ ಕೆ ಆರ್ ಮಾರ್ಕೆಟ್ಗೆ ಹೋಗುತ್ತಿತ್ತು. ಚಾಲಕ ಅಮರೇಶ್ ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ಬಲಭಾಗದಲ್ಲಿದ್ದ ಬೈಕ್ಗೆ ಬಸ್ ಟಚ್ ಆಗಿದೆ.
ಮಹಿಳೆ ಗಾಡಿ ಓಡಿಸುತ್ತಿದ್ದಾಗ ಬಸ್ ಟಚ್ ಆಗಿದೆ. ಬಳಿಕ ಮಹಿಳೆ ಏಕಾಏಕಿ ಬಸ್ ಹತ್ತಿ ಬಂದು ಚಾಲಕನನ್ನ ಎಳೆದು ಹಲ್ಲೆ ಮಾಡಿದ್ದಾಳೆ. ಮತ್ತೊಬ್ಬ ವ್ಯಕ್ತಿ ಕೂಡ ಚಾಲಕನ ಮೇಲೆ ಹಲ್ಲೆ ಮಾಡಿದ್ದು, ಚಾಲಕ ಬಸ್ನಲ್ಲೇ ಕುಸಿದು ಬಿದ್ದಿದ್ದ.
ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಘಟನೆ ಸಂಬಂಧ ಕಾಮಾಕ್ಷಿ ಪಾಳ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ : ಕರ್ನಾಟಕ ಫಿಲ್ಮ್ ಚೇಂಬರ್ ಚುನಾವಣೆ ಫಲಿತಾಂಶ ಪ್ರಕಟ – ಅಧ್ಯಕ್ಷರಾಗಿ ಎಂ ನರಸಿಂಹಲು ಆಯ್ಕೆ..!
Post Views: 315