ಚಿಕ್ಕಬಳ್ಳಾಪುರ : ವಿಜಯಪುರದಿಂದ ಆರಂಭವಾದ ವಕ್ಫ್ ವಿವಾದ ರಾಜ್ಯಾದ್ಯಂತ ಕಿಡಿ ಹೊತ್ತಿಸಿದೆ. ರೈತರ ಜಮೀನು, ದೇವಸ್ಥಾನದ ಜಾಗ, ಮಠಕ್ಕೆ ಸೇರಿದ ಭೂಮಿ ಹೀಗೆ ಹಲವು ಜಾಗಗಳಿಗೆ ವಕ್ಫ್ ನೋಟಿಸ್ ನೀಡುವ ಮೂಲಕ ವಿವಾದ ಹುಟ್ಟು ಹಾಕಿತ್ತು. ವಕ್ಫ್ ವಿಚಾರದಲ್ಲಿ ಬಿಜೆಪಿ ಇಂದು ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟನೆ ನೆಡೆಸಿದೆ.
ಚಿಕ್ಕಬಳ್ಳಾಪುರದಲ್ಲಿ ನಡೆದ ಪ್ರತಿಭಟನೆಗೆ ಆರ್.ಅಶೋಕ್ ಸಾಥ್ ಕೊಟ್ಟಿದ್ದಾರೆ. ಪ್ರತಿಭಟನೆಗೂ ಮುನ್ನ ವಿಪಕ್ಷ ನಾಯಕ ಆರ್.ಅಶೋಕ್ ಮುದ್ದೇನಹಳ್ಳಿಯಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ ಸಮಾಧಿಗೆ ಪೂಜೆ ಸಲ್ಲಿಸಿದರು.
ಚಿಕ್ಕಬಳ್ಳಾಪುರ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೂ ಬೃಹತ್ ಪ್ರತಿಭಟನೆ ನಡೆದಿದೆ. ಪ್ರತಿಭಟನೆಯಲ್ಲಿ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್, ಕೋಲಾರ ಮಾಜಿ ಸಂಸದ ಮುನಿಸ್ವಾಮಿ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.
ಪ್ರತಿಭಟನ ವೇಳೆ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡ ಆರ್.ಅಶೋಕ್ ಅವರು, ವಿಶ್ವೇಶ್ವರಯ್ಯನವರು ಓದಿದ್ದ ಶಾಲೆಯನ್ನೇ ವಕ್ಪ್ ಆಸ್ತಿ ಎಂದು ತೋರಿಸಲಾಗಿದೆ. ಅರ್ಜಿ ಸಲ್ಲಿಸದೇ ಇದ್ದರೂ ಏಕಾಏಕಿ ವಕ್ಫ್ ಆಸ್ತಿ ಎಂದು ನಮೂದಿಸಿದ್ದೇಕೆ ಎಂದು ತರಾಟೆಗೆ ತಗೆದುಕೊಂಡಿದ್ದಾರೆ.
ಇದನ್ನೂ ಓದಿ : ಯಾರು ಸ್ಥಿತಿವಂತರೋ ಅವರ BPL ಕಾರ್ಡ್ ರದ್ದಾಗುತ್ತೆ – ಗೃಹ ಸಚಿವ ಜಿ. ಪರಮೇಶ್ವರ್..!
Post Views: 47