ಹಾಸನ : ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಸೋಲುಂಡಿರುವ ಬಿಜೆಪಿಯವರು ‘ವಕ್ಫ್ ಹೋರಾಟ’ ಎಂಬ ರಾಜಕೀಯ ನಾಟಕ ಪ್ರಾರಂಭಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯವರ ವಕ್ಫ್ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿರುವ ಬಗ್ಗೆ ಹಾಸನದಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯನವರು, ನೋಟಿಸ್ ಕೊಟ್ಟವರೂ ಅವರೇ.. ಹೋರಾಟ ಮಾಡೋರೂ ಅವರೇ. ಬಿಜೆಪಿ ಕೇಂದ್ರ ಮ್ಯಾನಿಫೆಸ್ಟೋದಲ್ಲಿ ಏನ್ ಹೇಳಿದ್ರು? ವಕ್ಫ್ ಭೂಮಿ ವಿಚಾರದಲ್ಲಿ ಬಿಜೆಪಿ ನಿಲುವೇನು? ವಕ್ಫ್ ವಿಚಾರದಲ್ಲಿ ಬಿಜೆಪಿಯದ್ದು ಇಬ್ಬಗೆ ನೀತಿ ಎಂದು ಗುಡುಗಿದ್ದಾರೆ.
ಇನ್ನು ಬೈ ಎಲೆಕ್ಷನ್ನಲ್ಲಿ ಮೂರಕ್ಕೆ ಮೂರು ಸೋತಿದ್ದಾರೆ. ಶಿಗ್ಗಾಂವಿ 25 ವರ್ಷದ ನಂತ್ರ ಕಾಂಗ್ರೆಸ್ ಪಾಲಾಗಿದೆ. ಚನ್ನಪಟ್ಟಣವನ್ನೂ ನಾವೇ ಕಿತ್ತುಕೊಂಡಿದ್ದೇವೆ. ರಾಜಕೀಯವಾಗಿ ಹೋರಾಡಲು ಇಶ್ಯೂ ಇಲ್ಲ. ಹೀಗಾಗಿ ವಕ್ಫ್ ವಿಚಾರ ಮುಂದಿಟ್ಟುಕೊಂಡಿದ್ದಾರೆ. ಬಿಜೆಪಿಗೆ ಸೂಕ್ತ ಉತ್ತರ ಕೊಡ್ತೀವಿ ಎಂದ ಸಿಎಂ ಸಿದ್ದು ತಿಳಿಸಿದ್ದಾರೆ.
ಇದನ್ನೂ ಓದಿ : ಹಾಡಿನಲ್ಲೇ ಮೋಡಿ ಮಾಡಿದ ‘ಕೋರ’ – ಸುನಾಮಿ ಕಿಟ್ಟಿ ನಟನೆಯ ಚಿತ್ರ ಶೀಘ್ರದಲ್ಲೇ ತೆರೆಗೆ..!