ವಿಜಯಪುರ : ಕಾಲುವೆಗೆ ಬಿದ್ದ ಕುರಿಮರಿ ರಕ್ಷಣೆಗೆ ಹೋಗಿ ಕುರಿಗಾಯಿಯೊರ್ವ ಸಾವನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ನಾಗಬೇಳ ಗ್ರಾಮದಲ್ಲಿ ನಡೆದಿದೆ. ನಾಗಬೇನಾಳ ಗ್ರಾಮದ 28 ವರ್ಷದ ಮಂಜುನಾಥ್ ಮೃತಪಟ್ಟ ಯುವಕ.
ಮೃತ ಮಂಜುನಾಥ್ ಕುರಿ ಕಾಯಲು ನಾರಾಯಣಪೂರ ಎಡದಂಡೆ ಕಾಲುವೆ ಬಳಿ ಹೋಗಿದ್ದಾಗ ಕುರಿ ಕಾಲುವೆಗೆ ಬಿದಿದ್ದೆ. ಕಾಲುವೆಗೆ ಬಿದ್ದ ಕುರಿ ಮರಿಯ ರಕ್ಷಣೆಗೆ ಧಾವಿಸಿ ಮಂಜುನಾಥ ಕಾಲುವೆಗೆ ಹಾರಿದ್ದಾನೆ. ಆಗ ಕಾಲುವೆಯಲ್ಲಿ ನೀರಿನ ರಭಸ ಹೆಚ್ಚಾಗಿದ್ರಿಂದ ಕೊಚ್ಚಿ ಹೋಗಿದ್ದಾನೆ. ಇನ್ನು ಪೊಲೀಸರು, ಅಗ್ನಿ ಶಾಮಕದಳ ಸಿಬ್ಬಂದಿ ಯುವಕನ ಶವ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ : ಹಾವೇರಿ : ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚನೆ – ಕೇಸ್ ದಾಖಲು..!
Post Views: 98