ಬೆಂಗಳೂರು : ವಾಲ್ಮೀಕಿ ಹಗರಣ ಕೇಸ್ನಲ್ಲಿ ಮಾಜಿ ಮಂತ್ರಿ ಬಿ.ನಾಗೇಂದ್ರ ಪರಪ್ಪನ ಅಗ್ರಹಾರ ಸೇರಿದ್ದಾರೆ. ನಾಗೇಂದ್ರಗೆ ಆಗಸ್ಟ್ 3ರವರೆಗೂ ನ್ಯಾಯಾಂಗ ಬಂಧನ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ.
ಈ ಹಗರಣ ಕೇಸ್ ಸಂಬಂಧ ಜಾರಿ ನಿರ್ದೇಶನಾಲಯದ (ED) ತಂಡ ನಾಗೇಂದ್ರ ಅವರ ಮನೆಗೆ ದಾಳಿ ಮಾಡಿತ್ತು. ಬಳಿಕ ಮಾಜಿ ಸಚಿವರನ್ನ ED ವಶಕ್ಕೆ ಪಡೆದಿದ್ದ ಅಧಿಕಾರಿಗಳು ಸತತ ವಿಚಾರಣೆಗೆ ಒಳಪಡಿಸಿದ್ದರು. ವಿಶೇಷ ನ್ಯಾಯಾಲಯ ಎರಡನೇ ಬಾರಿ 5 ದಿನ ಕಸ್ಟಡಿಗೆ ನೀಡಿದ್ದ ಹಿನ್ನೆಯಲ್ಲಿ ED ಅಧಿಕಾರಿಗಳು ಕಳೆದ 10 ದಿನಗಳಿಂದ ನಾಗೇಂದ್ರರನ್ನು ವಿಚಾರಣೆ ಮಾಡುತ್ತಿತ್ತು.
ಆದರೆ ಇಂದು ನ್ಯಾಯಾಂಗ ಬಂಧನ ಅವಧಿ ಮುಗಿದ ಹಿನ್ನೆಲೆಯಲ್ಲಿ ED ಅಧಿಕಾರಿಗಳು ಕೋರ್ಟ್ಗೆ ಹಾಜರು ಪಡಿಸಿದ್ದರು. ಇದೀಗ ವಾದ-ಪ್ರತಿವಾದ ಆಲಿಸಿದ ಕೋರ್ಟ್ ನಾಗೇಂದ್ರಗೆ 13 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.
ಇದನ್ನೂ ಓದಿ : ನಾಳೆ ಮೋದಿ 3.0 ಸರ್ಕಾರದ ಮೊದಲ ಬಜೆಟ್ – ಇತಿಹಾಸ ಸೃಷ್ಟಿಗೆ ಸಜ್ಜಾದ ಸಚಿವೆ ನಿರ್ಮಲಾ ಸೀತಾರಾಮನ್..!
Post Views: 90