Download Our App

Follow us

Home » ಸಿನಿಮಾ » ರೀ ರಿಲೀಸ್​​ನಲ್ಲೂ ದಾಖಲೆ ಬರೆದ ‘ಉಪೇಂದ್ರ’ – ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ..!

ರೀ ರಿಲೀಸ್​​ನಲ್ಲೂ ದಾಖಲೆ ಬರೆದ ‘ಉಪೇಂದ್ರ’ – ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ..!

ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸಿದ್ದ ಹಾಗೂ ಶಿಲ್ಪ ಶ್ರೀನಿವಾಸ್ ಅವರು ನಿರ್ಮಿಸಿದ್ದ “ಉಪೇಂದ್ರ” ಚಿತ್ರ 1999 ರಲ್ಲಿ ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿತ್ತು. ಈಗ ಇಪ್ಪತ್ತೈದು ವರ್ಷಗಳ ನಂತರ ಚಿತ್ರ ಕಳೆದವಾರ ರೀ ರಿಲೀಸ್ ಆಗಿದೆ. ಇಪ್ಪತ್ತೈದು ವರ್ಷಗಳ ನಂತರವೂ ಚಿತ್ರಕ್ಕೆ ಅದೇ ತರಹ ಅದ್ದೂರಿ ಓಪನಿಂಗ್ ಸಿಕ್ಕಿದೆ. ಉಪ್ಪಿ ಅಭಿಮಾನಿಗಳು ಚಿತ್ರವನ್ನು ನೋಡಿ ಫಿದಾ ಆಗಿದ್ದಾರೆ.

ಚಿತ್ರ ಮರು ಬಿಡುಗಡೆಯಾಗಿ ಒಂದು ವಾರ ಪೂರೈಸಿ ಎರಡನೇ ವಾರಕ್ಕೆ ಕಾಲಿಡುತ್ತಿದೆ. ಅನೇಕ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ತ್ರಿವೇಣಿ ಸೇರಿದಂತೆ ಅನೇಕ ಚಿತ್ರಮಂದಿರಗಳಲ್ಲಿ ಎರಡನೇ ವಾರದಲ್ಲೂ ಸಿನಿಮಾ ಮುಂದುವರೆಯಲಿದೆ. ಈ ಚಿತ್ರ ಬರೀ ಕನ್ನಡಿಗರಿಗಷ್ಟೇ ಅಲ್ಲ. ಅನ್ಯ ಭಾಷೆಯವರಿಗೂ ಮೆಚ್ಚುಗೆಯಾಗಿದೆ. ಚಿತ್ರದ ರಿಮೇಕ್ ರೈಟ್ಸ್ ನೀಡುವಂತೆ ನಿರ್ಮಾಪಕರಿಗೆ ಅನೇಕ ಭಾಷೆಗಳಿಂದ ಬೇಡಿಕೆ ಬರುತ್ತಿದೆ.

ಇಪ್ಪತ್ತೈದು ವರ್ಷಗಳ ನಂತರವೂ ಜನರು “ಉಪೇಂದ್ರ” ಚಿತ್ರಕ್ಕೆ ತೋರುತ್ತಿರುವ ಒಲವಿಗೆ ಮನತುಂಬಿ ಬಂದಿದೆ ಎಂದು ತಿಳಿಸಿರುವ ನಿರ್ಮಾಪಕ ಶಿಲ್ಪ ಶ್ರೀನಿವಾಸ್, ಚಿತ್ರತಂಡಕ್ಕೆ ಹಾಗೂ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ : ಸಿಎಂ ಸಿದ್ದು ರಾಜೀನಾಮೆಗೆ ಬಿಜೆಪಿ ಬಿಗಿ ಪಟ್ಟು – ಆರ್.ಅಶೋಕ್ ನೇತೃತ್ವದಲ್ಲಿ ವಿಧಾನಸೌಧದ ಮುಂಭಾಗ ಪ್ರೊಟೆಸ್ಟ್..!

Leave a Comment

DG Ad

RELATED LATEST NEWS

Top Headlines

4 ಅಂತಸ್ತಿನ ಕಟ್ಟಡ ಕುಸಿತ – ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ, ಮಗು..!

ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ತಾಯಿ ಮಗು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆಘಾತಕಾರಿ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೊದಲ್ಲಿ

Live Cricket

Add Your Heading Text Here