ಉಪೇಂದ್ರ ನಟನೆ ಮತ್ತು ನಿರ್ದೇಶನದ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ “ಯುಐ” ಸಿನಿಮಾ ಡಿ.20 ರಂದು ಬಿಡುಗಡೆಯಾಗಲಿದೆ. ಉಪ್ಪಿ 2 ಚಿತ್ರದ ನಂತರ ಅವರು ಯಾವ ಸಿನಿಮಾಗೂ ಆಕ್ಷನ್ ಕಟ್ ಹೇಳಿರಲಿಲ್ಲ. ಇದೀಗ ಯುಐ ಸಿನಿಮಾ ನಿರ್ದೇಶಿಸಿ ನಟಿಸಿದ್ದು, ಈ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ.
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೋಲ್ ಸಾಂಗ್ ಹಾಗೂ ವಾರ್ನರ್ ವಿಡಿಯೋ ಪ್ರೇಕ್ಷಕರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ. ಅಕ್ಕ-ಪಕ್ಕದ ರಾಜ್ಯಗಳಲ್ಲೂ ಉಪ್ಪಿ ಅಭಿಮಾನಿಗಳಿದ್ದು, ಬಾಲಿವುಡ್ ಸ್ಟಾರ್ ನಟ ಅಮಿರ್ ಖಾನ್ ಕೂಡ ತಾವು ಉಪೇಂದ್ರ ಅಭಿಮಾನಿ ಅಂತ ಹೇಳಿದ್ದಾರೆ.
ಇದೀಗ ಬಿಟಿವಿಗೆ ನೀಡಿದ ಸಂದರ್ಶನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ‘ಯುಐ’ ಟೈಟಲ್ ಹಿಂದಿನ ರಹಸ್ಯ ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ನಾನು ಯಾವತ್ತು ಜನರ ಕಲ್ಪನೆಗೆ ರೀಚ್ ಮಾಡಲು ಪ್ರಯತ್ನ ಪಡ್ತೇನೆ. ಎಷ್ಟೋ ಟ್ಯಾಲೆಂಟೆಡ್ ಇರ್ತಾರೆ. ಫ್ಯಾನ್ಸ್ ಏನೋ ಸಿನಿಮಾದ ವಿಷ್ಯುವಲ್ಸ್ ಬಿಟ್ಟಿರ್ತಾರೆ. ಆಗ ನಮಗೆ ತುಂಬಾ ಐಡಿಯಾ ಸಿಗುತ್ತೆ. ಅದ್ರಿಂದ ನಾನು ಕಲಿಯುತ್ತೇವೆ. ಹೀಗೆನೇ ‘ಯುಐ’ ಟೈಟಲ್ ಬಂತು ಅನಿಸುತ್ತೆ ಎಂದಿದ್ದಾರೆ.
ಇನ್ನು ಫ್ಯಾನ್ಸ್ ಡಿಕೊಂಡಿಂಗ್ ಮಾಡೊದ್ರಿಂದ ನಮಗೆ ಕಾನ್ಫಿಡೆನ್ಸ್ ಬರುತ್ತೆ. ಇದು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ಉಪೇಂದ್ರ ಟೈಟಲ್ ಇಟ್ಟಾಗ ಡಿಕೊಂಡಿಂಗ್ ಮಾಡಿ ಏನೇನೋ ಹೇಳ್ಬಿಟ್ರು. ಆಗ ನಮಗೆ ಹೆಚ್ಚು ಕಾನ್ಫಿಡೆನ್ಸ್ ಬರತ್ತೇ ಎಂದಿದ್ದಾರೆ.
ಯುಐ’ ಸಿನಿಮಾವನ್ನು ವೀನಸ್ ಎಂಟರ್‌ಟೈನ್‌ಮೆಂಟ್ ಮತ್ತು ಲಹರಿ ಫಿಲ್ಡ್ ಜಂಟಿಯಾಗಿ ನಿರ್ಮಿಸುತ್ತಿವೆ. ನಟ ಉಪೇಂದ್ರ ಅವರು ಹಲವು ವರ್ಷಗಳ ಬಳಿಕ ನಿರ್ದೇಶಕನ ಕ್ಯಾಪ್ ತೊಟ್ಟಿರುವ ಚಿತ್ರ ಇದಾಗಿದೆ. ನಟ ಸಾಧು ಕೋಕಿಲಾ ಅವರೂ ಪ್ರಮುಖ ಪಾತ್ರದಲ್ಲಿದ್ದಾರೆ. ಬಿ.ಅ ಜನೀಶ್ ಲೋಕನಾಥ್ ಅವರ ಸಂಗೀತ ಚಿತ್ರಕ್ಕಿದೆ.
ಇದನ್ನೂ ಓದಿ : ‘ಚಿಡೋ’ ಸೈಕ್ಲೋನ್ ಅಬ್ಬರಕ್ಕೆ ತತ್ತರಿಸಿದ ಫ್ರಾನ್ಸ್ – ಜನಜೀವನ ಅಸ್ತವ್ಯಸ್ತ, ನೂರಾರು ಮಂದಿ ಸಾವು!