Download Our App

Follow us

Home » ಜಿಲ್ಲೆ » ಉಡುಪಿ : ವಿದ್ಯಾರ್ಥಿನಿ ಮೇಲೆ ಅಟ್ಯಾಕ್ ಮಾಡಿದ ಬೀದಿ ನಾಯಿಗಳು – ಬಾಲಕಿ ಜಸ್ಟ್​ ಮಿಸ್​, ದೃಶ್ಯ ಸಿಸಿಟಿವಿಯಲ್ಲಿ ಸೆರೆ..!

ಉಡುಪಿ : ವಿದ್ಯಾರ್ಥಿನಿ ಮೇಲೆ ಅಟ್ಯಾಕ್ ಮಾಡಿದ ಬೀದಿ ನಾಯಿಗಳು – ಬಾಲಕಿ ಜಸ್ಟ್​ ಮಿಸ್​, ದೃಶ್ಯ ಸಿಸಿಟಿವಿಯಲ್ಲಿ ಸೆರೆ..!

ಉಡುಪಿ : ವಿದ್ಯಾರ್ಥಿನಿಯ ಮೇಲೆ ಬೀದಿ ನಾಯಿಗಳು ಅಟ್ಯಾಕ್ ಮಾಡಲು ಯತ್ನಿಸಿದ ಭಯಾನಕ ಘಟನೆ ಉಡುಪಿಯ ಹೂಡೆ ಪರಿಸರದಲ್ಲಿ ನಡೆದಿದೆ. ಶನಿವಾರ ಮುಂಜಾನೆ ವಿದ್ಯಾರ್ಥಿನಿ ಒಬ್ಬಳೆ ಶಾಲೆಗೆ ಹೋಗುತ್ತಿದ್ದಳು. ಈ ವೇಳೆ ಏಕಾಏಕಿ ನಾಲ್ಕೈದು ಬೀದಿ ನಾಯಿಗಳು ವಿದ್ಯಾರ್ಥಿನಿ ಮೇಲೆ ದಾಳಿಗೆ ಮುಂದಾಗಿದೆ.

ನಾಯಿ ತನ್ನತ್ತ ಬರುವದನ್ನು ಕಂಡ ವಿದ್ಯಾರ್ಥಿನಿ ಕೈಯಲ್ಲಿದ್ದ ಕೊಡೆಯನ್ನು ಬೀಸಿ ಭಯದಿಂದ ಕಿರುಚಾಡಿ ತನ್ನನ್ನು ತಾನು ರಕ್ಷಿಸಿಕೊಂಡಿದ್ದಾಳೆ. ಈ ವೇಳೆ ನಾಯಿಗಳು ಓಡಿವೆ. ವಿದ್ಯಾರ್ಥಿನಿಯ ಮೇಲೆ ಬೀದಿನಾಯಿಗಳು ದಾಳಿ ನಡೆಸಲು ಯತ್ನಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆಯಿಂದ ಗ್ರಾಮಸ್ಥರು ಆಕ್ರೋಶಿತರಾಗಿದ್ದು ತಕ್ಷಣ ನಾಯಿ ಹಾವಳಿಗೆ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಜನಪ್ರತಿನಿಧಿಗಳು, ಶಾಸಕರು, ಜಿಲ್ಲಾಡಳಿತ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪುಟ್ಟ ಪುಟ್ಟ ಮಕ್ಕಳನ್ನು ನಾಯಿ ದಾಳಿಯಿಂದ ರಕ್ಷಿಸಬೇಕಾಗಿದೆ.

ಇದನ್ನೂ ಓದಿ : ಉಡುಪಿಯಲ್ಲಿ ಖಾಸಗಿ ಬಸ್​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಲಾರಿ – ಓರ್ವ ವಿದ್ಯಾರ್ಥಿ ಗಂಭೀರ..!

Leave a Comment

DG Ad

RELATED LATEST NEWS

Top Headlines

ಹುಬ್ಬಳ್ಳಿ-ಪುಣೆ ವಂದೇ ಭಾರತ್​ ರೈಲಿಗೆ ಇಂದು ಪ್ರಧಾನಿ ಮೋದಿ ಚಾಲನೆ..!

ದೇಶದ ಮೊದಲ ವಂದೇ ಭಾರತ್​ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿದ್ದಾರೆ. ಗುಜರಾತ್​ನ ಭುಜ್​-ಅಹ್ಮದಾಬಾದ್​ ನಡುವೆ ವಂದೇ ಭಾರತ್​ ಮೆಟ್ರೋ ಸಂಚಾರ ಮಾಡಲಿದೆ. 100-250

Live Cricket

Add Your Heading Text Here