ಚಿಕ್ಕಬಳ್ಳಾಪುರ : ತಿರುಪತಿ ತಿಮ್ಮಪ್ಪನ ದರ್ಶನ ಮುಗಿಸಿ ವಾಪಸ್ ಆಗುವ ವೇಳೆ ಕಾರಿನ ಮೇಲೆ ಟ್ರಕ್ ಉರುಳಿ ಬಿದ್ದು ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಚಿಕ್ಕಬಳ್ಳಾಪುರದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 55 ವರ್ಷದ ಮುನಿವೆಂಕಟರೆಡ್ಡಿ, 37 ವರ್ಷದ ಮಂಜುನಾಥ್, 38 ವರ್ಷದ ರಮೇಶ್ ಮೃತರು.
ಕಾರಿನಲ್ಲಿದ್ದ ಮತ್ತೊಬ್ಬರಿಗೆ ಗಂಭೀರ ಗಾಯವಾಗಿದ್ದು, ಮೃತರೆಲ್ಲರು ಚಿಕ್ಕಬಳ್ಳಾಪುರ ತಾಲೂಕಿನ ಹರಿಸ್ಥಳ ಗ್ರಾಮಕ್ಕೆ ಸೇರಿದವರಾಗಿದ್ದಾರೆ ಎಂದು ತಿಳಿದು ಬಂದಿದೆ. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ತೇಜಸ್ ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೋಲಾರ ಕಡೆಯಿಂದ ಟೊಮ್ಯಾಟೋ ತುಂಬಿಕೊಂಡು ಹೋಗ್ತಿದ್ದ ಟೆನ್ ವ್ಹೀಲರ್ ಟ್ರಕ್, ರಸ್ತೆ ತಿರುವಿನಲ್ಲಿ ಆಯತಪ್ಪಿ ಕಾರಿನ ಮೇಲೆ ಮೇಲೆ ಬಿದ್ದು ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿ : ನಿರ್ದೇಶಕ ನಾಗಶೇಖರ್ ಹೊಸ ಸಿನಿಮಾ ಅನೌನ್ಸ್ – “ಕ್ಯೂ”ನೊಂದಿಗೆ ಕನ್ನಡಕ್ಕೆ ಅವಂತಿಕಾ ದಸ್ಸಾನಿ ಎಂಟ್ರಿ..!
Post Views: 1,458