Download Our App

Follow us

Home » ಸಿನಿಮಾ » ಹಂಸಲೇಖ ಅವರಿಂದ ‘ಲುಕ್ ಬ್ಯಾಕ್’ ಚಿತ್ರದ ಟ್ರೇಲರ್ ರಿಲೀಸ್ – ಸೆ.27ಕ್ಕೆ ಸಿನಿಮಾ ತೆರೆಗೆ..!

ಹಂಸಲೇಖ ಅವರಿಂದ ‘ಲುಕ್ ಬ್ಯಾಕ್’ ಚಿತ್ರದ ಟ್ರೇಲರ್ ರಿಲೀಸ್ – ಸೆ.27ಕ್ಕೆ ಸಿನಿಮಾ ತೆರೆಗೆ..!

ರಂಜನ್ ಮುಲಾರತ್ ನಿರ್ದೇಶನದ ‘ಲುಕ್ ಬ್ಯಾಕ್’ ಚಿತ್ರ ಮಲಯಾಳಂ, ಕನ್ನಡ, ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ತಯಾರಾಗಿದೆ. ಇದು ಕೇರಳದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಕಳರಿ ಪಯಟ್ಟು ಎಂಬ ಯುದ್ದ ಕಲೆ ಕುರಿತಾದ ಸಿನಿಮಾವಾಗಿದ್ದು, ಕನ್ನಡದಲ್ಲಿ ಈ ಚಿತ್ರಕ್ಕೆ ‘ನೆನೆ ಮನವೆ’ ಎಂದು ಹೆಸರು ಇಡಲಾಗಿದೆ. ಇದೇ ಸೆಪ್ಟೆಂಬರ್ 27ರಂದು ಕರ್ನಾಟಕ ಮತ್ತು ಕೇರಳದಲ್ಲಿ ರಿಲೀಸ್ ಆಗಲಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಟ್ರೇಲರ್ ಬಿಡುಗಡೆ ಮಾಡಿದ ಹಿರಿಯ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ‘ನಾನು ಇದರಲ್ಲಿ ಸಪೋರ್ಟಿಂಗ್ ಪಾತ್ರ ನಿರ್ವಹಿಸಿದ್ದೇನೆ. ಭಾರತೀಯ ಪ್ರಾಚೀನ ಕಲೆಯ ಸಿನಿಮಾ ಮಾಡಿರುವ ಉದ್ದೇಶ ಚೆನ್ನಾಗಿದೆ. ಸಾಂಗ್‌ಗೆ ಕೆಲಸ ಮಾಡಿ ಕೊಟ್ಟಿದ್ದೇನೆ. ಕಳರಿ ಅಂದರೆ ಕಳೆಯನ್ನು ಕಿತ್ತು ಹಾಕು ಎನ್ನಬಹುದು. ಮೈಮೇಲೆ ಮನಸಿನ ಮೇಲೆ ಅರಿವಿರಬೇಕು ಎಂಬುದು ಚಿತ್ರದ ಆಶಯವಾಗಿದೆ. ಪ್ರತೀಕಾರದ ಕಥೆ ಒಳಗೊಂಡಿದ್ದು, ಕ್ಲೈಮ್ಯಾಕ್ಸ್​​ನಲ್ಲಿ ಕ್ಷಮಿಸು ಎಂದು ಹೇಳಲಾಗಿದೆ. ಇಂದಿನ ಹೆಣ್ಣು ಮಕ್ಕಳು ರಕ್ಷಣೆಗೆ ದೃಷ್ಠಿಯಿಂದ ಈ ಕಲೆಯನ್ನು ಕಲಿಯಬೇಕು’ ಎಂದು ಹೇಳಿದರು.

ಅಂದಹಾಗೆ ಈ ಚಿತ್ರವನ್ನು ರಂಜನ್ ಮುಲಾರತ್ ನಿರ್ದೇಶನ, ನಟನೆ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ರಂಜನ್ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಮೂರು ವರ್ಷಗಳ ಹಿಂದೆ ಸಿನಿಮಾ ಶುರುವಾಗಿ ಸ್ಟ್ರಗಲ್​​ನಿಂದ ಸಾಗುತ್ತಾ ಬಂತು. ಕಳರಿ ಪಯಟ್ಟು ಮಾರ್ಷಲ್ ಆರ್ಟ್ಸ್ ಒಂದು ಭಾಗ. ಕಥೆ ಎಲ್ಲಾ ಭಾಷೆಗೆ ಆಪ್ತವಾಗಿದ್ದರಿಂದ ಇಂಗ್ಲೀಷ್‌ನಲ್ಲಿ ಸಂಭಾಷಣೆ ಇರುವ ಟ್ರೇಲರ್ ರಿಲೀಸ್ ಮಾಡಲಾಗಿದೆ. ಚಿತ್ರದಲ್ಲಿ ಕಳರಿ ಪಯಟ್ಟು ಕಲೆಯೇ ಹೀರೋ ಎನ್ನಬಹುದು. ಇನ್ನು 84 ವರ್ಷದ ಕಳರಿ ಪಯಟ್ಟು ಕಲೆಯಲ್ಲಿ ಪದ್ಮಶ್ರೀ ಅವಾರ್ಡ್ ಪಡೆದಿರುವ ಮೀನಾಕ್ಷಿಯಮ್ಮ ಕೂಡ ನಟಿಸಿದ್ದು, ಅವರು ಇರುವುದು ನಮಗೆ ಬಲ ಸಿಕ್ಕಿದೆ. ಇನ್ನು ಚಿತ್ರದ ಹೃದಯ ಸಂಗೀತ ಎನ್ನಬಹುದು. ಹಂಸಲೇಖ ಸೇರಿದಂತೆ ನಾಲ್ಕು ವಿದೇಶಿ ಸಂಗೀತ ನಿರ್ದೇಶಕರು ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಕೇರಳ ಹಾಗೂ ಕರ್ನಾಟಕ ಸೆ. 27 ರಂದು ಸಿನಿಮಾ ರಿಲೀಸ್ ಆಗಲಿದ್ದು, ನಂತರ ದಿನಗಳಲ್ಲಿ ದೇಶ, ವಿದೇಶಗಳಲ್ಲಿ ಬಿಡುಗಡೆ ಆಗಲಿದೆ. ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಸಿನಿಮಾ ಇದಾಗಿದೆ’ ಎಂದು ತಿಳಿಸಿದರು.

ಚಿತ್ರದ ನಾಯಕಿಯಾಗಿ ಪ್ರಮುಖ ಪಾತ್ರ ನಿರ್ವಯಿಸಿರುವ ಉಪಾಸನಾ ಗುರ್ಜನ್ ಅವರು, ‘ನಿರ್ದೇಶಕರು ಕಥೆ ಹೇಳಿದಾಗ ಭಯ ಆಯ್ತು. ಇದು ತುಂಬಾ ಸ್ಪೆಷಲ್ ಸಿನಿಮಾ ನಂಗೆ. ಅಜ್ಜಿ ಮನೆಯಲ್ಲಿ ಶೂಟ್ ಮಾಡಲಾಗಿದೆ. ಕಳರಿ ಪಯಟ್ಟು ಟ್ರೇನಿಂಗ್ ಪಡೆದು ಪಾತ್ರ ಮಾಡಿದ್ದೇನೆ. ಇಂದಿನ ಯುಗದಲ್ಲಿ ಮಹಿಳೆಯರು ಸ್ವ ರಕ್ಷಣೆ ಮಾಡಿಕೊಳ್ಳಲು ಕಲರಿ ಉತ್ತಮ ಆಯ್ಕೆ ಹಾಗೂ ಆರೋಗ್ಯಕ್ಕೂ ಇದು ಒಳ್ಳೆಯ ಕಲೆ ಆಗಿದೆ’ ಎನ್ನುವರು. ಚಿತ್ರದ ಛಾಯಾಗ್ರಾಹಕ ಕೃಷ್ಣ ನಾಯಕರ್ ‘ಚಿತ್ರದಲ್ಲಿ 10 ಫೈಟ್ ಇವೆ. ಒಂದು ತಿಂಗಳು ಕೇರಳ ಹಾಗೂ ಆಗುಂಬೆಯಲ್ಲಿ ಶೂಟಿಂಗ್ ಮಾಡಲಾಗಿದೆ’ ಎಂದರು. ವೇದಿಕೆಯಲ್ಲಿ ನಿರ್ದೇಶಕರ ಪುತ್ರ ಆರ್ಯನಾಥ್ ಮುಲಾರತ್ ಹಾಗೂ ಮಡದಿ ಸಿನಿ ರಂಜನ್ ತಮ್ಮ ಅನುಭವ ಹಂಚಿಕೊಂಡರು.

ಇದನ್ನೂ ಓದಿ : ಬೆಂಗಳೂರು : ಗ್ರಾಹಕರ ವಿಚಾರಕ್ಕೆ ಬಟ್ಟೆ ಅಂಗಡಿ ಮಾಲೀಕನ ಮೇಲೆ ಹಲ್ಲೆ.. ದೃಶ್ಯ ಸಿಸಿಟಿವಿಯಲ್ಲಿ ಸೆರೆ..!

Leave a Comment

DG Ad

RELATED LATEST NEWS

Top Headlines

ವೇದಿಕೆಯಲ್ಲಿ ಕಣ್ಣೀರಿಟ್ಟ ಸಮಂತಾರನ್ನು ಅಪ್ಪಿಕೊಂಡು ಸಮಾಧಾನಿಸಿದ ಆಲಿಯಾ..!

ಹೈದರಾಬಾದ್ : ಬಾಲಿವುಡ್​ ನಟಿ ಆಲಿಯಾ ಭಟ್ ಹಾಗೂ ಸಮಂತಾ ರುತ್ ಪ್ರಭು ಹೈದರಾಬಾದ್​ನಲ್ಲಿ ನಿನ್ನೆ ನಡೆದ ಜಿಗ್ರಾ ಸಿನಿಮಾದ ಗ್ರ್ಯಾಂಡ್ ಪ್ರಿ ರಿಲೀಸ್ ಇವೆಂಟ್​ನಲ್ಲಿ ಒಟ್ಟಿಗೆ

Live Cricket

Add Your Heading Text Here