Download Our App

Follow us

Home » ಜಿಲ್ಲೆ » ದೀಪಾವಳಿ ಹಬ್ಬಕ್ಕೆಂದು ಊರಿಗೆ ಬಂದವರ ದುರಂತ ಅಂತ್ಯ.. ನೀರಿನ ಹೊಂಡದಲ್ಲಿ ಮುಳುಗಿ ಮೂವರು ಸಾವು..!

ದೀಪಾವಳಿ ಹಬ್ಬಕ್ಕೆಂದು ಊರಿಗೆ ಬಂದವರ ದುರಂತ ಅಂತ್ಯ.. ನೀರಿನ ಹೊಂಡದಲ್ಲಿ ಮುಳುಗಿ ಮೂವರು ಸಾವು..!

ಚಿಕ್ಕಬಳ್ಳಾಪುರ : ನೀರಿನ ಹೊಂಡದಲ್ಲಿ ಮುಳುಗಿ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕಮ್ಮತನಹಳ್ಳಿ ಗ್ರಾಮದಲ್ಲಿ ನಡೆದಿದೆ. ಓರ್ವ ಯುವತಿ ಇಬ್ಬರು ಯುವಕರು ನೀರು ಪಾಲಾದ ದುರಂತಕ್ಕೆ ಈ ಗ್ರಾಮ ಸಾಕ್ಷಿಯಾಗಿದೆ.

ಮೃತರನ್ನು 27 ವರ್ಷದ ರಂಜಿತ್​, 21 ವರ್ಷದ ಅಭಿಲಾಷ್ ಹಾಗೂ 24 ವರ್ಷದ ರಮ್ಯ ಎಂದು ಗುರುತಿಸಲಾಗಿದೆ. ದೀಪಾವಳಿ ವೇಳೆ ಹಬ್ಬಕ್ಕೆ ಊರಿಗೆ ಅಂತ ಬಂದಿದ್ದ ಯುವತಿ ಯುವಕರು ಈಜಲು ಹೋಗಿದ್ದರು.

ಈ ವೇಳೆ ಈಜು ಬಾರದ ರಮ್ಯಾ ನೀರಲ್ಲಿ ಏಕಾಏಕಿ ಮುಳುಗಿದ್ದಳು. ಅದನ್ನು ಕಂಡು ಆಕೆಯನ್ನು ರಕ್ಷಿಸಿಲು ಅಭಿಲಾಷ್ ನೀರಿಗೆ ಧುಮುಕಿದ್ದ, ಆ ಬಳಿಕ ರಮ್ಯಾ, ಅಭಿಲಾಷ್​ರನ್ನ ರಕ್ಷಿಸಲು ಹೋದ ರಂಜಿತ್ ಕೂಡ ನೀರುಪಾಲಾಗಿದ್ದಾನೆ. ಪೆರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ದರ್ಶನ್​ಗೆ ಟೆಸ್ಟ್​ ಮೇಲೆ ಟೆಸ್ಟ್.. ಇಂದೇ ವೈದ್ಯರ ಕೈ ಸೇರಲಿದೆ ದಾಸನ ಹೆಲ್ತ್ ರಿಪೋರ್ಟ್​..!

Leave a Comment

DG Ad

RELATED LATEST NEWS

Top Headlines

ನಟ ದರ್ಶನ್​ಗೆ ನಾಳೆ ನಿರ್ಣಾಯಕ ದಿನ – ಏನಾಗಲಿದೆ ಬೇಲ್ ಭವಿಷ್ಯ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿರುವ ನಟ ದರ್ಶನ್​​ಗೆ ನಾಳೆ ನಿರ್ಣಾಯಕ ದಿನವಾಗಿದೆ. ಮಧ್ಯಂತರ ಜಾಮೀನು ಪಡೆದು ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ ಸದ್ಯ

Live Cricket

Add Your Heading Text Here