ನೇಪಾಳದಲ್ಲಿ ಭೀಕರ ದುರಂತವೊಂದು ಸಂಭವಿಸಿದ್ದು, 40 ಪ್ರಯಾಣಿಕರಿದ್ದ ಭಾರತದ ಬಸ್ ಇಂದು ಮುಂಜಾನೆ 11 ಗಂಟೆ ಸುಮಾರಿಗೆ ನದಿಗೆ ಉರುಳಿ ಬಿದ್ದಿದೆ. ಮಾಹಿತಿ ಪ್ರಕಾರ ದುರ್ಘಟನೆಯಲ್ಲಿ 14 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದು, ಉಳಿದ ಪ್ರಯಾಣಿಕರ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.
40 ಜನರನ್ನು ಹೊತ್ತೊಯ್ಯುತ್ತಿದ್ದ ಭಾರತೀಯ ಬಸ್ ತನಾಹುನ್ ಜಿಲ್ಲೆಯ ಮರ್ಸ್ಯಾಂಗ್ಡಿ ನದಿಗೆ ಬಿದ್ದಿದೆ. ಈ ಬಗ್ಗೆ ತನಹುನ್‌ನ ಡಿಎಸ್‌ಪಿ ದೀಪ್‌ಕುಮಾರ್ ರಾಯಾ ಖಚಿತಪಡಿಸಿದ್ದಾರೆ.
ಯುಪಿ ಎಫ್‌ಟಿ 7623 ನಂಬರ್ ಪ್ಲೇಟ್ ಹೊಂದಿರುವ ಬಸ್ ನದಿಗೆ ಬಿದ್ದಿದ್ದು, ಬಸ್ ಪೋಖರಾದಿಂದ ಕಠ್ಮಂಡುವಿಗೆ ಹೋಗುತ್ತಿತ್ತು ಎನ್ನಲಾಗಿದೆ. ಸದ್ಯ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಮಾಧವ್ ಪೌಡೆಲ್ ನೇತೃತ್ವದ 45 ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿಯ ತಂಡವು ಅಪಘಾತ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.
ಇದನ್ನೂ ಓದಿ : ರಾಜ್ಯಪಾಲರು ನಮ್ಮ ಸರ್ಕಾರದ ವಿರುದ್ದ ಇದ್ದಾರೆಂಬುದು ಸ್ಪಷ್ಟ – ಡಾ.ಜಿ.ಪರಮೇಶ್ವರ್..!
Post Views: 246