ಬೆಂಗಳೂರು : ವಿಐಪಿ ಟ್ರೇಡಿಂಗ್ ಅಕೌಂಟ್ನಲ್ಲಿ ಹೂಡಿಕೆ ಮಾಡಿದ ಹಣ 28 ಕೋಟಿ ಆಗಿದೆ ಎಂದು ಬಿಂಬಿಸಿ ವಂಚನೆ ಎಸಗಿದ ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಸೇರಿ 8 ಜನ ಸೈಬರ್ ವಂಚಕರನ್ನು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು (CCB) ಬಂಧಿಸಿದ್ದಾರೆ. ಕಾರ್ತಿಕ್, ಕೇಂಗೆಗೌಡ, ಕಿಶೋರ್ ಸಾಹು, ಲಕ್ಷ್ಮಿಕಾಂತ, ಮಾಲ, ಮನೋಹರ್, ರಘುರಾಜ್, ರಾಕೇಶ್ ಬಂಧಿತ ಆರೋಪಿಗಳು.
ಈ ಖತರ್ನಾಕ್ ಸೈಬರ್ ವಂಚಕರು 75 ಲಕ್ಷ ಹಣ ನೀಡಿದ್ರೆ 28 ಕೋಟಿ ಹಿಂಪಡೆಯಬಹುದು ಎಂದು ಮೆಸೇಜ್ ರವಾನಿಸಿದ್ದರು. ಇದನ್ನ ನಂಬಿದ ಜನರು 75 ಲಕ್ಷ ಹಣ ಹೂಡಿಕೆ ಮಾಡಿದ್ದರು. ನಂತರ ಅದೊಂದು ಚೀಟಿಂಗ್ ಎಂದು ತಿಳಿದ ಬಳಿಕ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ಕೈಗೊಂಡ ಬಳಿಕ ಎಸ್ಸಿಆರ್ಪಿ-1930ರಲ್ಲಿ ದೂರುದಾರರು ಹೂಡಿಕೆ ಮಾಡಿದ್ದ ಬ್ಯಾಂಕ್ ವಿವರ ಪಡೆದಿದ್ದರು. ಈ ವೇಳೆ ಬೆಂಗಳೂರಿನ ಆಕ್ಸಿಸ್ ಬ್ಯಾಂಕ್ನಲ್ಲಿ ಅಕೌಂಟ್ ಇರುವುದು ತಿಳಿದು ಬಂದಿದೆ. ಈ ಅಕೌಂಟ್ನಲ್ಲಿ ಒಟ್ಟು 97 ಕೋಟಿ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿತ್ತು.
ಒಟ್ಟು ನಾಲ್ಕು ಬ್ಯಾಂಕ್ ಖಾತೆಗಳು ತೆರೆಯಲಾಗಿತ್ತು. ಇದರಲ್ಲಿ ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಹಾಗೂ ಮೂವರು ಸೇಲ್ಸ್ ಮ್ಯಾನ್ಗಳು ವಂಚನೆಯಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಸದ್ಯ ಸೈಬರ್ ಕ್ರೈಂ ಪೊಲೀಸರು ಈ ಪ್ರಕರಣ ಸಂಬಂಧ ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಸೇರಿ 8 ಜನ ಸೈಬರ್ ವಂಚಕರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ದರ್ಶನ್ ಫ್ಯಾನ್ಸ್ ಹುಚ್ಚಾಟಕ್ಕೆ ಶ್ರವಣ ಶಕ್ತಿಯನ್ನೇ ಕಳ್ಕೊಂಡ ಹಿರಿಯ ಸಾಹಿತಿ ಗೊರೂರು ಚೆನ್ನಬಸಪ್ಪ..!