ನಾವು ಬೈಕಿನಲ್ಲಿ ಕೋಳಿ, ಕುರಿ, ನಾಯಿ ಮರಿಗಳನ್ನು ಸಾಗಿಸುವುದನ್ನು ನೋಡಿರುತ್ತೇವೆ. ಆದರೆ ಇಲ್ಲೊಂದಿಬ್ಬರು ಆಸಾಮಿಗಳು ತಮ್ಮ ಬೈಕಿನಲ್ಲಿ ಒಂಟೆಯನ್ನು ಕೂರಿಸಿಕೊಂಡು ಹೋದಂತಹ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಹೌದು, ಇಬ್ಬರು ವ್ಯಕ್ತಿಗಳು 8-9 ಅಡಿ ಎತ್ತರದ ಒಂಟೆಯನ್ನು ಬೈಕಿನಲ್ಲಿ ಸಾಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಒಂಟೆಯನ್ನು ಕಟ್ಟಿಹಾಕಿ ಬೈಕಿನಲ್ಲಿ ಸಾಗಿಸುತ್ತಿರುವುದನ್ನು ಕಾಣಬಹುದು.
ವೈರಲ್ ವಿಡಿಯೋದಲ್ಲಿ, ಇಬ್ಬರು ಬೈಕ್‍ನಲ್ಲಿ ಒಂಟೆಯೊಂದರ ಕಾಲುಗಳನ್ನು ಕಟ್ಟಿಕೊಂಡು ಕೂರಿಸಿದ್ದಾರೆ. ಹಿಂದೆ ಕುಳಿತ ವ್ಯಕ್ತಿ ಒಂಟೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಬೈಕ್ ಮುಂದೆ ಸಾಗುವಾಗ ಒಂಟೆ ಕೂಗುತ್ತಾ ಸವಾರಿ ಮಾಡಿದೆ.
ಈ ಅಸಾಮಾನ್ಯ ದೃಶ್ಯವನ್ನು ಕಂಡು ದಾರಿಹೋಕರು ಆಶ್ಚರ್ಯಗೊಂಡಿದ್ದಾರೆ. ಒಂಟೆಯನ್ನು ಬೈಕ್‍ನಲ್ಲಿ ಕಟ್ಟಿಕೊಂಡು ಸಾಗಿಸುವುದು ನಂಬಲಾಗದ ವಿಚಾರವಾಗಿದೆ. ಹಾಗಾಗಿ ಈ ದೃಶ್ಯ ಎಲ್ಲರಿಗೂ ವಿಚಿತ್ರವಾಗಿ ಕಂಡಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅನೇಕರು ನಾನಾ ಬಗೆಯ ಕಮೆಂಟನ್ನು ಮಾಡಿದ್ದಾರೆ.
ಇದನ್ನೂ ಓದಿ : ಕಳಪೆ ಪಟ್ಟ ಪಡೆದು ಜೈಲಿಗೆ ಹೋದ ಚೈತ್ರಾ.. ಕಣ್ ಸನ್ನೆಯಲ್ಲಿ ನಡೀತಾ ನಿರ್ಧಾರಗಳು?