ಚಿತ್ರದುರ್ಗ : ಐತಿಹಾಸಿಕ ಏಳು ಸುತ್ತಿನ ಕೋಟೆಯಲ್ಲಿ ಪ್ರವಾಸಿಗನೊಬ್ಬ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಚನ್ನಗಿರಿ ತಾಲ್ಲೂಕಿನ ಚಿರದೋಣಿ ಗ್ರಾಮದ ಓಂಕಾರಿ ಗಾಯಗೊಂಡವರು. ತುಪ್ಪದಕೊಳ ವೀಕ್ಷಣೆಗೆ ಹೆಬ್ಬಂಡೆ ಏರಿ ಹೋಗುವ ವೇಳೆ ಅವಘಡ ಸಂಭವಿಸಿದೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಕೋಟೆಯ ಪ್ರವಾಸಿ ಮಿತ್ರರ ತಂಡ ಕೋಟೆ ಮೇಲ್ಬಾಗದಿಂದ ಗಾಯಾಳುವನ್ನು ಹೊತ್ತು ತಂದು, ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ತಲೆಗೆ ಗಂಭೀರವಾದ ಗಾಯಗಳಾಗಿವೆ. ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಬಿಜೆಪಿ ಶಾಸಕ ಸುರೇಶ್ ಕುಮಾರ್‌ಗೆ ಅನಾರೋಗ್ಯ – ಐಸಿಯುನಲ್ಲಿ ಚಿಕಿತ್ಸೆ..!
Post Views: 152