ಬೆಂಗಳೂರು : ‘ಮುಸ್ಲಿಮರಿಗೆ ಮತದಾನದ ಹಕ್ಕನ್ನು ರದ್ದುಪಡಿಸಲು ಕಾನೂನು ಜಾರಿ ಮಾಡಬೇಕು’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಚಂದ್ರಶೇಖರನಾಥ ಸ್ವಾಮೀಜಿಗೆ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಉಪ್ಪಾರಪೇಟೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಇದೀಗ ಸ್ವಾಮೀಜಿಗೆ ನೋಟಿಸ್ ಕೊಟ್ಟಿದ್ದಕ್ಕೆ ಆಕ್ರೋಶ ಹೊರಹಾಕಿದ ವಿಪಕ್ಷ ನಾಯಕ ಆರ್.ಅಶೋಕ್ ಅವರು, ಒಕ್ಕಲಿಗ ಸ್ವಾಮೀಜಿಯನ್ನು ಮುಟ್ಟಿದ್ರೆ ಸುಮ್ಮನಿರಲ್ಲ. ಸ್ವಾಮೀಜಿಗೆ ಕಿರುಕುಳ ಕೊಟ್ರೆ ಬೀದಿಗಿಳಿದು ಹೋರಾಟ ಮಾಡುತ್ತಿವಿ. ಒಕ್ಕಲಿಗರು ಇಂಥಾ ಬೆದರಿಕೆಗೆಲ್ಲಾ ಜಗ್ಗಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ಒಕ್ಕಲಿಗರದ್ದು ದೊಡ್ಡ ಸಮುದಾಯ. ಸಿಎಂ ಸಿದ್ದರಾಮಯ್ಯನವರು ಪೊಲೀಸರಿಗೆ ತಿಳಿ ಹೇಳಬೇಕಿತ್ತು. ಸ್ವಾಮೀಜಿ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಇಷ್ಟಾದರೂ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದಿದ್ದು ಸರಿಯಲ್ಲ. ದೊಡ್ಡ ಸಮುದಾಯವನ್ನು ಈ ಸರ್ಕಾರ ಟಾರ್ಗೆಟ್ ಮಾಡ್ತಿದೆ. ರಾಜಕೀಯ ಪಾರ್ಟಿ ಬೇರೆ, ರಾಜಕಾರಣ ಬೇರೆ. ಈ ಸರ್ಕಾರದ ನಡವಳಿಕೆ ಸರಿಯಲ್ಲ. ಸ್ವಾಮೀಜಿ ಕ್ಷಮೆ ಕೇಳಿದ ನಂತರವೂ ನೋಟಿಸ್ ಕೊಟ್ಟಿದ್ದು ದ್ವೇಷ ಅಲ್ವಾ? ಎಂದು ಸ್ವಾಮೀಜಿ ಭೇಟಿ ನಂತರ ವಿಪಕ್ಷ ನಾಯಕ ಆರ್ ಅಶೋಕ್ ಕಿಡಿ ಕಾರಿದ್ದಾರೆ.
ಈ ಮಧ್ಯೆ ನೋಟಿಸ್ ವಾಪಸ್ ಪಡೆಯುವಂತೆ ಬಿಜೆಪಿ ಒಕ್ಕಲಿಗರ ಆಗ್ರಹ ಮಾಡಿದ್ದಾರೆ. ನೋಟಿಸ್ ನಂತರ ಮನವಿ ಮಾಡಿದ ವಕೀಲ RLN ಮೂರ್ತಿ ಅವರು, ಶ್ರೀಗಳ ವಿರುದ್ಧ ಕ್ರಿಮಿನಲ್ ಪ್ರಕರಣ ಹಾಕಿರುವುದು ಸರಿಯಲ್ಲ.ಕೂಡಲೇ ಸ್ವಾಮೀಜಿಗೆ ನೀಡಿರುವ ನೋಟಿಸ್ ವಾಪಸ್ ಪಡೆಯಬೇಕು ಎಂದು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಭೇಟಿ ಕೊಟ್ಟು ವಕೀಲರ ಸಂಘ ಮನವಿ ಮಾಡಿದೆ.
ಇದನ್ನೂ ಓದಿ : ಸಂಪುಟ ಸರ್ಜರಿ ಸದ್ಯಕ್ಕಿಲ್ಲ – ಹೈಕಮಾಂಡ್ ಭೇಟಿ ಬಳಿಕ ಸಿಎಂ, ಡಿಸಿಎಂ ಸ್ಪಷ್ಟನೆ..!