ಚಿಕ್ಕಬಳ್ಳಾಪುರ : ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಹೋಟೆಲ್ಗೆ ನುಗ್ಗಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಹಲವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಕೋಲಾರ ವೃತ್ತದಲ್ಲಿ ನಡೆದಿದೆ. ಶಿವಾನಂದ್(62) ಶಾಂತಕುಮಾರ್(48) ಮೃತ ದುರ್ದೈವಿಗಳು.
ಜೆಲ್ಲಿ ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್ ಚಾಕಲನ ನಿಯಂತ್ರಣ ತಪ್ಪಿ ಹೊಟೇಲ್ ನುಗ್ಗಿದೆ. ಟಿಪ್ಪರ್ ಹೋಟೆಲ್ಗೆ ನುಗ್ಗಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಹಲವರು ಗಂಭೀರ ಗಾಯಗೊಂಡಿದ್ದಾರೆ. ಘಟನೆ ಬಳಿಕ ಚಾಲಕ ಮುರಳಿ ಪರಾರಿಯಾಗಿದ್ದಾನೆ. ಇನ್ನು ಗಾಯಾಳುಗಳನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ : ನನ್ನ ಮಗನನ್ನು ಕೊಂದವರನ್ನು ಸುಮ್ಮನೆ ಬಿಡ್ಬೇಡಿ – ಮಗನ ಕೊನೆ ಕ್ಷಣದ ಫೋಟೋ ನೋಡಿ ರೇಣುಕಾಸ್ವಾಮಿ ತಂದೆ ಕಣ್ಣೀರು..!
Post Views: 21