Download Our App

Follow us

Home » ಸಿನಿಮಾ » ಎಷ್ಟೊಂದು ಸಖತ್‌ ಆಗಿದೆ ಗೊತ್ತಾ ಈ ಬಾರಿಯ ಬಿಗ್‌ ಬಾಸ್‌ ಮನೆ – ಮೇಕಿಂಗ್‌ ವಿಡಿಯೋ ಔಟ್..!

ಎಷ್ಟೊಂದು ಸಖತ್‌ ಆಗಿದೆ ಗೊತ್ತಾ ಈ ಬಾರಿಯ ಬಿಗ್‌ ಬಾಸ್‌ ಮನೆ – ಮೇಕಿಂಗ್‌ ವಿಡಿಯೋ ಔಟ್..!

ದೊಡ್ಮನೆ ಆಟಕ್ಕೆ ಕೌಂಟ್ ಡೌನ್ ಶುರುವಾಗಿದೆ. ಈ ಬಾರಿ ಸ್ವರ್ಗ ಮತ್ತು ನರಕ ಅಂತ ಎರಡು ಥೀಮ್‌ಗಳೊಂದಿಗೆ ‘ಬಿಗ್ ಬಾಸ್’ ಆಟ ಶುರುವಾಗಲಿದೆ. ಅದ್ಧೂರಿಯಾಗಿ ಸಿದ್ಧವಾಗಿರುವ ಕನ್ನಡ ‘ಬಿಗ್ ಬಾಸ್’ ಸೀಸನ್ 11ರ ಮನೆಯ ತೆರೆಹಿಂದಿನ ಕಸರತ್ತು ಹೇಗಿತ್ತು? ಎಂಬುದರ ಝಲಕ್ ಅನ್ನು ವಾಹಿನಿ ರಿವೀಲ್ ಮಾಡಿದೆ.

ಈ ಬಾರಿ ಸ್ವರ್ಗ ಮತ್ತು ನರಕ ಅಂತ ಥೀಮ್‌ನಲ್ಲಿ ದೊಡ್ಮನೆ ಆಟ ಶುರುವಾಗಲಿದ್ದು, ಸ್ವರ್ಗ ಮತ್ತು ನರಕ ಎರಡು ಲೋಕವನ್ನು ತೋರಿಸಲು ‘ಬಿಗ್ ಬಾಸ್’ ತಂಡ ದೊಡ್ಡ ಮಟ್ಟದಲ್ಲಿಯೇ ತಯಾರಿ ಮಾಡಿರುವ ಚೆಂದದ ವಿಡಿಯೋವನ್ನು ಹರಿಬಿಟ್ಟಿದೆ.

ಲಕ್ಷುರಿ ಆಗಿಯೇ ಬಿಗ್‌ ಬಾಸ್‌ ಮನೆ ಸಿದ್ಧವಾಗಿದೆ. ವಿಡಿಯೋದಲ್ಲಿ ಪೂರ್ತಿಯಾಗಿ ಬಿಗ್ ಬಾಸ್ ಮನೆ ಹೇಗಿರಲಿದೆ ಎಂಬ ಅನಾವರಣ ಆಗದೇ ಇದ್ದರೂ ಮೇಕಿಂಗ್ ಝಲಕ್‌ನಿಂದ ಫ್ಯಾನ್ಸ್‌ಗೆ ಸುಳಿವಂತೂ ಸಿಕ್ಕಿದೆ. ಎಂದಿನಂತೆ ಈ ಬಾರಿಯೂ ಬಿಗ್​ ಮನೆಗೆ ಘಟಾನುಘಟಿ ಸ್ಪರ್ಧಿಗಳ ಆಗಮನವಾಗಲಿದೆ. ‘ಬಿಗ್’ ಮನೆಗೆ ಬರಲಿರುವ ಸ್ಪರ್ಧಿಗಳು ಸ್ವರ್ಗ ಮತ್ತು ನರಕದಲ್ಲಿ ಯಾವ ಟೀಮ್‌ಗೆ ಯಾರೆಲ್ಲಾ ಹೋಗ್ತಾರೆ ಎಂಬುದು ಜನರಲ್ಲಿ ಹೆಚ್ಚು ಕುತೂಹಲ ಕೆರಳಿಸಿದೆ.

ಇನ್ನೂ ಈ ಬಾರಿ ಬಿಗ್ ಬಾಸ್ ಶೋ ಪ್ರಾರಂಭಕ್ಕೂ ಮೊದಲೇ ಕೆಲ ಸ್ಪರ್ಧಿಗಳ ಹೆಸರನ್ನು ‘ಬಿಗ್ ಬಾಸ್​’ ತಂಡ ರಿವೀಲ್ ಮಾಡಿದೆ. ಕಳೆದ ಸೀಸನ್‌ಗಿಂತ ಪ್ರಭಲ ಸ್ಪರ್ಧಿಗಳೇ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದು, ನಿನ್ನೆ ‘ರಾಜ ರಾಣಿ’ ಗ್ರ್ಯಾಂಡ್ ಫಿನಾಲೆಯಲ್ಲಿ ಸರ್ಪ್ರೈಸ್‌ ಆಗಿ ಸ್ಪರ್ಧಿಗಳನ್ನು ರಿವೀಲ್ ಮಾಡಲಾಗಿದೆ.

ಸುಮಾರು ಮೂರ್ನಾಲ್ಕು ವರ್ಷಗಳಿಂದ ವೀಕ್ಷಕರನ್ನ ರಂಜಿಸುತ್ತಾ ಬಂದಿದ್ದ ಸತ್ಯ ಧಾರಾವಾಹಿಯ ಖ್ಯಾತ ನಟಿ ಗೌತಮಿ ಜಾಧವ್ ಅವರು ಈ ಬಾರಿ ದೊಡ್ಮನೆಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಎರಡನೇ ಸ್ಪರ್ಧಿಯಾಗಿ ಅಚ್ಚರಿಯ ರೀತಿಯಲ್ಲಿ ಲಾಯರ್ ಜಗದೀಶ್​ ಎಂಟ್ರಿ ಕೊಟ್ಟರೆ, ಮೂರನೇ ಸ್ಪರ್ಧಿಯಾಗಿ ಕರಾವಳಿಯ ಫೈರ್ ಬ್ರಾಂಡ್ ಚೈತ್ರಾ ಕುಂದಾಪುರ ಬಂದಿದ್ದಾರೆ. 4ನೇ ಸ್ಪರ್ಧಿಯಾಗಿ ಗೋಲ್ಡ್​ ಸುರೇಶ್ ಬಿಗ್​ ಬಾಸ್​ ಮನೆಯೊಳಗೆ ಕಾಲಿಡಲಿದ್ದಾರೆ. ಇಂದು ಸಂಜೆ 6ಕ್ಕೆ ಗ್ರ‍್ಯಾಂಡ್ ಆಗಿ ಬಿಗ್ ಬಾಸ್ ಲಾಂಚ್ ಆಗುತ್ತಿದ್ದು, ಪ್ರತಿದಿನ ರಾತ್ರಿ 9.30ಕ್ಕೆ ಶೋ ಪ್ರಸಾರವಾಗಲಿದೆ ಎಂದು ವಾಹಿನಿ ತಿಳಿಸಿದೆ. ಇನ್ನು ಯಾರೆಲ್ಲಾ ಸ್ಪರ್ಧಿಗಳು ದೊಡ್ಮನೆಗೆ ಬರಲಿದ್ದಾರೆ ಎಂದು ಇಂದು ಸಂಜೆ ಗೊತ್ತಾಗಲಿದೆ.

ಇದನ್ನೂ ಓದಿ : ಬಿಗ್ ಬಾಸ್ ಮನೆಗೆ 2ನೇ ಸ್ಪರ್ಧಿಯಾಗಿ ​ಅಚ್ಚರಿ ರೀತಿಯಲ್ಲಿ ಎಂಟ್ರಿ ಕೊಟ್ಟ ವಕೀಲ ಜಗದೀಶ್..!

Leave a Comment

DG Ad

RELATED LATEST NEWS

Top Headlines

4 ಅಂತಸ್ತಿನ ಕಟ್ಟಡ ಕುಸಿತ – ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ, ಮಗು..!

ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ತಾಯಿ ಮಗು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆಘಾತಕಾರಿ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೊದಲ್ಲಿ

Live Cricket

Add Your Heading Text Here