ಕೊಡಗು : ಕೊಡಗು ಜಿಲ್ಲೆಯ ವಿರಾಜಪೇಟೆ-ಮಡಿಕೇರಿ ಮುಖ್ಯರಸ್ತೆ ಮಧ್ಯಭಾಗದಲ್ಲಿ ಹುಲಿಯೊಂದು ಪ್ರತ್ಯಕ್ಷವಾಗಿದ್ದು, ಹುಲಿಯನ್ನು ಕಂಡ ಗ್ರಾಮಸ್ಥರು ಭೀತಿಗೊಳಗಾಗಿದ್ದಾರೆ. ಕಳೆದ ರಾತ್ರಿ ಹುಲಿ ಪ್ರತ್ಯಕ್ಷವಾದ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ಅರಣ್ಯ ಇಲಾಖೆ, ಸ್ಥಳಕ್ಕೆ ದೌಡಯಿಸಿದೆ.
ಕುಕ್ಲೂರು ಮುತ್ತಪ್ಪ ದೇವಸ್ಥಾನದ ಮುಂದೆ ಹುಲಿ ಪ್ರತ್ಯಕ್ಷವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಹುಲಿ ಹೆಜ್ಜೆ ಗುರುತು ಪತ್ತೆ ಹಚ್ಚಿದ್ದಾರೆ. ಇನ್ನು ಸ್ಥಳಕ್ಕೆ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಭೇಟಿ ನೀಡಿದ್ದಾರೆ.
ಹುಲಿಯನ್ನು ಕಂಡು ಶಾಲಾ ಮಕ್ಕಳು, ಕಾರ್ಮಿಕರು, ವಾಹನ ಸವಾರರಲ್ಲಿ ಭಯ ಹೆಚ್ಚಾಗಿದೆ. 20ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳು, ಹುಲಿ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಜನರನ್ನು ಎಚ್ಚರಿಕೆಯಿಂದಿರಲು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : ಟೆಕ್ಕಿ ಅತುಲ್ ಆತ್ಮಹತ್ಯೆ ಕೇಸ್ – ಪೊಲೀಸರ ಮುಂದೆ ಶಾಕಿಂಗ್ ಸ್ಟೆಟ್ಮೆಂಟ್ ಕೊಟ್ಟ ಪತ್ನಿ ನಿಖಿತಾ..!
Post Views: 91