ಬೆಂಗಳೂರು : ಖತರ್ನಾಕ್ ಕಳ್ಳನೊಬ್ಬ ಹಣದ ಜೊತೆ ಈರುಳ್ಳಿ ಕದ್ದು ಎಸ್ಕೇಪ್ ಆಗಿರುವ ಘಟನೆ ಯಶವಂತಪುರ RMC ಯಾರ್ಡ್ನಲ್ಲಿ ನಡೆದಿದೆ. ಚಾಲಾಕಿ ಕಳ್ಳನ ಕೈಚಳಕ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಆಗಸ್ಟ್ 18ರಂದು ಮಧ್ಯರಾತ್ರಿ ಕಳ್ಳ ಕಿರಾಣಿ ಸ್ಟೋರ್, ಈರುಳ್ಳಿ ಗೋಡೌನ್ ಸೇರಿ ನಾಲ್ಕೈದು ಅಂಗಡಿಗಳಿಗೆ ನುಗ್ಗಿದ್ದಾನೆ. ಅಂಗಡಿಗಳಲ್ಲಿ ಕೈಗೆ ಸಿಕ್ಕಷ್ಟು ಹಣ ದೋಚಿ, ನಂತರ ಈರುಳ್ಳಿ ಗೋಡಾನ್ಗೆ ನುಗ್ಗಿ 300 ಚಿಲ್ಲರೆ ಹಣವನ್ನೂ ಬಿಡದೆ ಕದ್ದು ಕಾಲ್ಕಿತ್ತಿದ್ದಾನೆ. ಈ ಘಟನೆ RMC ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ಓಮಿನಿ ಕಾರು-ಲಾರಿ ನಡುವೆ ಭೀಕರ ಅಪಘಾತ – ಒಂದೇ ಕುಟುಂಬದ ಮೂವರು ಸಾವು..!
Post Views: 43