ಹುಬ್ಬಳ್ಳಿ : ಓಮಿನಿ ಕಾರು ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಕಿರೇಸೂರ ಗ್ರಾಮದ ಬಳಿ ನಡೆದಿದೆ. ಇನ್ನು ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದಾರೆ.
ಮೃತರು ಕೊಪ್ಪಳ ತಾಲೂಕಿನ ಮಂಗಳಾಪೂರ ಗ್ರಾಮದ ನಿವಾಸಿಗಳಾಗಿದ್ದು, 6 ವರ್ಷದ ಮಗು ಸೇರಿ ಮೂವರ ದುರ್ಮರಣ ಸಂಭವಿಸಿದೆ. 60 ವರ್ಷದ ಜಾಫರಸಾಬ, 36 ವರ್ಷದ ಮುಸ್ತಫಾ, 06 ವರ್ಷದ ಶೊಹೇಬ್ ಮೃತ ದುರ್ದೈವಿಗಳು. ಮೂವರು ಗಾಯಗೊಂಡವರಿಗೆ ಧಾರವಾಡದ SDM ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ : ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಶಿಖರ್ ಧವನ್..!
Post Views: 207