ಬಿಗ್‌ಬಾಸ್ ಕನ್ನಡ ಸೀಸನ್ 10ರ ಬಳಿಕ ಮುನ್ನೆಲೆಗೆ ಬಂದ ನಟಿ ತನಿಷಾ ಕುಪ್ಪಂಡ ಅವರು, ಈ ಹಿಂದೆ ಸಾಕಷ್ಟು ಸಿನಿಮಾ ಮತ್ತು ಸೀರಿಯಲ್‌ಗಳಲ್ಲಿ ನಟಿಸಿದ್ದರೂ, ದೊಡ್ಡ ಮಟ್ಟದ ಫೇಮ್ ಸಿಕ್ಕಿರಲಿಲ್ಲ. ಆದರೆ, ಬಿಗ್‌ಬಾಸ್‌ನಲ್ಲಿ ತಮ್ಮ ಖಡಕ್ ಮಾತು, ವ್ಯಕ್ತಿತ್ವದ ಮೂಲಕವೇ ನಾಡಿನ ಗಮನ ಸೆಳೆದಿರುವ ಇವರು ಬಿಗ್‌ಬಾಸ್ ಬಳಿಕ ಸಾಕಷ್ಟು ಸಿನಿಮಾ ಅವಕಾಶ ಪಡೆಯುತ್ತಿದ್ದಾರೆ. ಸದ್ಯ ತನಿಷಾ ಕುಪ್ಪಂಡ ಸಿನಿಮಾದ ಜೊತೆಗೆ ಉದ್ಯಮ ಕ್ಷೇತ್ರಗಳಲ್ಲೂ ಬ್ಯುಸಿಯಾಗಿದ್ದಾರೆ.
ಇದಕ್ಕೂ ಮೊದಲು ತನಿಷಾ ಕುಪ್ಪಂಡ ಅವರು ‘ಪೆಂಟಗನ್’ ಚಿತ್ರದಲ್ಲಿ ನಟಿಸಿ ಸುದ್ದಿಯಲ್ಲಿದ್ದರು. ಹೌದು, ಕಳೆದ ವರ್ಷ ತನಿಷಾ ಅವರು ನಟಿಸಿರುವ ಪೆಂಟಗನ್ ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ತನಿಷಾ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಚಿತ್ರ ಬಿಡುಗಡೆಗೂ ಮುನ್ನ, ಬ್ಯಾಕ್‌ಲೆಸ್ ಆಗಿರುವ ತನಿಷಾ ಕುಪ್ಪಂಡ ಲಿಪ್ ಲಾಕ್ ಕೂಡ ಮಾಡಿರುವ ಹಾಡು ರಿಲೀಸ್ ಆಗುತ್ತಿದ್ದಂತೆಯೇ ಹಲ್ಚಲ್ ಸೃಷ್ಟಿಸಿತ್ತು.
ಇದೀಗ ತನಿಷಾ ಅವರು ಈ ಹಾಡು ರಿಲೀಸ್ ಆದ ಬಳಿಕ ಹಾಗೂ ಚಿತ್ರವನ್ನು ನೋಡಿದ ಬಳಿಕ ಕೆಲವರು ತಮಗೆ ಮಾಡಿದ ನೋವು ಹಾಗೂ ಆದ ಕಹಿ ಘಟನೆಗಳ ಕುರಿತು ಸಂದರ್ಶನವೊಂದರಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಮೊದಲು ತಾವು ಈ ಚಿತ್ರಕ್ಕೆ ಒಪ್ಪಿಕೊಂಡದ್ದು ಏಕೆ ಎನ್ನುವುದನ್ನು ತಿಳಿಸಿದ ಅವರು, ನಿರ್ದೇಶಕರು ಬಂದು ಈ ಚಿತ್ರದ ಬಗ್ಗೆ ವಿವರಿಸುವಾಗ ಇದರಲ್ಲಿ ಇರುವ ಬೋಲ್ಡ್, ಇಂಟಿಮೇಟ್ ದೃಶ್ಯಗಳ ಕುರಿತು ಹೇಳಿದರು. ಚಿತ್ರಕ್ಕೆ ಅಗತ್ಯ ಬಿದ್ದರೆ ಈ ದೃಶ್ಯಗಳನ್ನು ಮಾಡಲು ನಾನು ಸಿದ್ಧ. ಆದರೆ ಮೊದಲೇ ಹೇಳಬೇಕು ಎಂದೆ. ಆಮೇಲೆ ಅದನ್ನು ಮಾಡು, ಇದನ್ನು ಮಾಡು ಎಂದ್ರೆ ನಾನು ಮಾಡಲ್ಲ ಎಂದೆ. ಅದರಂತೆಯೇ ನಡೆದುಕೊಂಡರು ಕೂಡ ಎಂದಿದ್ದಾರೆ.
ಪೆಂಟಗನ್ ಚಿತ್ರದಲ್ಲಿ ಇಂಟಿಮೇಟ್ ಸೀನ್ ಮಾಡುವಾಗ ತುಂಬಾ ಕನ್ಫರ್ಟ್ ಇತ್ತು. ಎಲ್ಲರನ್ನೂ ನಿರ್ದೇಶಕರು ಹೊರಕ್ಕೆ ಕಳಿಸಿದ್ದರು. ನನಗೆ ಈಜಿ ಫೀಲ್ ಮಾಡಿದರು. ಕ್ಯಾಮೆರಾಮೆನ್, ನಿರ್ದೇಶಕರು ಮತ್ತು ನಾವು ನಟರು ಅಷ್ಟೇ ಇದ್ವಿ. ಆದ್ದರಿಂದ ಯಾವುದೇ ಸಮಸ್ಯೆ ಆಗಲಿಲ್ಲ. ಆದರೆ ಚಿತ್ರದ ಮೊದಲ ಹಾಡು ಬಿಡುಗಡೆಯಾದಾಗ ತುಂಬಾ ಮಂದಿ ನೆಗೆಟಿವ್ ಆಗಿಯೂ ಕಮೆಂಟ್ ಮಾಡಿದ್ರು. ದುಡ್ಡಿಗಾಗಿ ಏನು ಬೇಕಾದ್ರೂ ಮಾಡ್ತಾರೆ ಎಂದ್ರು. ಇದು ನನಗೆ ನೋವಾಯಿತು. ಅಸಲಿಗೆ ಆ ಹಾಡಿನಲ್ಲಿ ಸಕತ್ ಬೋಲ್ಡ್ ಸೀನ್ ಇತ್ತು ಬಿಟ್ಟರೆ, ಚಿತ್ರ ನೋಡಿದಾಗ ಇಷ್ಟೇನಾ ಎನ್ನುವ ಹಾಗಿದೆ ಎಂದಿದ್ದಾರೆ.
ಇದನ್ನೂ ಓದಿ : ಬರ್ತ್ಡೇ ಸಮೀಪಿಸ್ತಿದ್ದಂತೆ ಫ್ಯಾನ್ಸ್ಗೆ ಅಭಿನಯ ಚಕ್ರವರ್ತಿ ಏನಂದ್ರು ಗೊತ್ತಾ?