ಕಲಬುರಗಿ : ಬಿಜೆಪಿ MLC ಸುನಿಲ್ ವಲ್ಯಾಪುರೆ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. 2022ರಲ್ಲಿ 12 ಕೋಟಿ ಹಣ ದುರ್ಬಳಕೆ ಮಾಡಿದ ಆರೋಪ ಸಂಬಂಧ ಕಲಬುರಗಿಯ ಸಂತೋಷ ಕಾಲೋನಿಯಲ್ಲಿರುವ ಸುನೀಲ್ ವಲ್ಯಾಪೂರೆ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಭೋವಿ ನಿಗಮದ ಹಗರಣದ ಬಗ್ಗೆ ರಾಜ್ಯ ಸರ್ಕಾರ ತನಿಖೆಗೆ ಸಿಐಡಿಗೆ ವಹಿಸಿತ್ತು. ಈ ಹಿನ್ನಲೆಯಲ್ಲಿ ಸಿಐಡಿ ಅಧಿಕಾರಿಗಳ ತಂಡ ವಲ್ಯಾಪೂರೆ ಮನೆ ಮೇಲೆ ದಾಳಿ ಮಾಡಿ ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದೆ. ನ್ಯಾಯಾಲಯದಿಂದ ಸರ್ಚ್ ವಾರೆಂಟ್ ತೋರಿಸಿ CID ಅಧಿಕಾರಿಗಳು ಮನೆಗೆ ಆಗಮಿಸಿದ್ದಾರೆ.
ಸುಮಾರು ನೂರಾರು ಕೋಟಿ ರೂ. ಅವ್ಯವಹಾರದಲ್ಲಿ ಭೋವಿ ಸಮಾಜದವರೇ ಆಗಿರುವ ಸುನೀಲ್ ವಲ್ಲ್ಯಾಪೂರೆ ಅವರ ಪಾತ್ರದ ಆರೋಪ ಬಂದ ಹಿನ್ನಲೆಯಲ್ಲಿ ಸಿಐಡಿ ದಾಳಿ ನಡೆಸಿದೆ. ರಾಜ್ಯದಲ್ಲಿ ವಾಲ್ಮೀಕಿ ನಿಗಮದ ಹಗರಣ ತೀವ್ರ ಚರ್ಚೆಯಾಗುತ್ತಿರುವ ಹೊತ್ತಲ್ಲೇ ಹಿಂದಿನ ಸರ್ಕಾರದದ ಭೋವಿ ನಿಗಮದ ಹಗರಣ ಹೊರಬಿದ್ದಿದೆ. ಸುನೀಲ್ ವಲ್ಯಾಪೂರೆ ತಮ್ಮ ರಾಜಕೀಯ ಪ್ರಭಾವ ಬಳಸಿ ಭೋವಿ ನಿಗಮದಲ್ಲಿ ಹಣ ದುರುಪಯೋಗಕ್ಕೆ ಕಾರಣವಾಗಿದ್ದಾರೆ ಎನ್ನುವ ಆರೋಪ ಎದುರಿಸುತ್ತಿದ್ದಾರೆ.
ಇದನ್ನೂ ಓದಿ : ಮಾನಸ-ಚೈತ್ರಾ ನಡುವೆ ವಾಕ್ಸಮರ – ತಾಳಿ ಹಿಡಿದು ಪ್ರಮಾಣ ಮಾಡಿದ ಮಾನಸ ಫುಲ್ ಟ್ರೋಲ್..!