ಹುಬ್ಬಳ್ಳಿ : ಕರ್ನಾಟಕದಲ್ಲಿ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುತ್ತಿರುವ ವಿಚಾರ ಬಹಳಷ್ಟು ಚರ್ಚೆಯಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಕೇಂದ್ರ ಸರ್ಕಾರ ಅಕ್ಕಿ ಪ್ರಮಾಣ ಕಡಿತ ಮಾಡಿಲ್ಲ. ರಾಜ್ಯ ಸರ್ಕಾರ ಯಾಕೆ BPL ಕಾರ್ಡ್ ಬದಲಿಸುತ್ತಿದೆ ಗೊತ್ತಿಲ್ಲ. ಆದರೆ, ಬಡವರಿಗೆ ಅನ್ಯಾಯ ಆಗಬಾರದು. ಈ ಬಗ್ಗೆ ಸಚಿವರ ಜೊತೆ ಮಾತಾಡ್ತೇನೆ ಎಂದು ತಿಳಿಸಿದ್ದಾರೆ.
ಭಾರತ ಸರ್ಕಾರ ದೇಶದಲ್ಲಿ ಜನತೆಗೆ ಬಹು ದೊಡ್ಡ ಮಟ್ಟದಲ್ಲಿ ಆಹಾರ ಭದ್ರತೆ ಒದಗಿಸುತ್ತಿದೆ. ಅಂತೆಯೇ ರಾಜ್ಯದ ಬಿಪಿಎಲ್ ಕಾರ್ಡದಾರರಿಗೂ ಪ್ರತಿ ವ್ಯಕ್ತಿಗೆ 5 ಕೆಜಿಯಂತೆ ಉಚಿತ ಅಕ್ಕಿ ಪೂರೈಸುತ್ತಿದೆ. ಆಹಾರ ಭದ್ರತೆಗಾಗಿ ಕೇಂದ್ರ ಸರ್ಕಾರ ಪ್ರತಿ ವರ್ಷ 2 ಲಕ್ಷ 11 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ ಎಂದಿದ್ದಾರೆ.
ಇನ್ನು ರಾಜ್ಯದಲ್ಲಿ ಗ್ಯಾರಂಟಿ ಎಡವಟ್ಟುಗಳಿಂದಾಗಿ ಇದೆಲ್ಲಾ ಆಗ್ತಿದೆ. ಅಕ್ಕಿಗೆ ಘೋಷಿಸಿದ ಹಣವನ್ನೂ ಅವರಿಂದ ಕೊಡಲು ಆಗ್ತಿಲ್ಲ. ಬಹುತೇಕರಿಗೆ ಯುವನಿಧಿ ಹಣ ಸಿಕ್ಕಿಲ್ಲ, ಗೃಹ ಲಕ್ಷ್ಮಿ ಹಣ ಬರ್ತಿಲ್ಲ ಎಂದು ಹುಬ್ಬಳ್ಳಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ಇದನ್ನೂ ಓದಿ : ನಿಖಿಲ್ ಅಂದುಕೊಂಡಿದಕ್ಕಿಂತಲೂ ದೊಡ್ಡ ಲೀಡ್ನಲ್ಲಿ ಗೆಲ್ತಾರೆ – ಲಕ್ಷ್ಮೀಕಾಂತ್ ಆಚಾರ್ಯ ಗುರೂಜಿ ಸ್ಫೋಟಕ ಭವಿಷ್ಯ..!