ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಜೈಲು ಸೇರಿದ್ದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ರಿಲೀಸ್ ಆಗಿದ್ದಾರೆ. ಇಂದು ಬೆಳಗ್ಗೆ ಚಂಚಲಗೂಡ ಸೆಂಟ್ರಲ್ ಜೈಲಿನಿಂದ ಅಲ್ಲು ಅರ್ಜುನ್ ಬಿಡುಗಡೆಯಾಗಿದ್ದಾರೆ. ಇದೇ ವಿಚಾರ ತಿಳಿದ ಕೂಡಲೇ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಹಾಗೂ ಸ್ನೇಹಿತರು ಫುಲ್ ಖುಷ್ ಆಗಿದ್ದಾರೆ.
ಜೈಲಿನಿಂದ ರಿಲೀಸ್ ಆಗಿ ಹೈದ್ರಾಬಾದ್ನ ಜ್ಯುಬಲೀ ಹಿಲ್ಸ್ನಲ್ಲಿರುವ ಮನೆಗೆ ಬರುತ್ತಿದ್ದಂತೆ ಅಲ್ಲು ಅರ್ಜುನ್‌ಗೆ ಪತ್ನಿ ಪ್ರೀತಿಯಿಂದ ಅಪ್ಪುಗೆ ಕೊಟ್ಟಿದ್ದಾರೆ. ಅಪ್ಪನ ಆಗಮನಕ್ಕೆ ಇಬ್ಬರು ಮಕ್ಕಳು ಕೂಡ ಖುಷಿಯಾಗಿದ್ದಾರೆ. ಇದಾದ ಬಳಿಕ ಕುಂಬಳಕಾಯಿ ಒಡೆದು ಅಲ್ಲು ಅರ್ಜುನ್‌ಗೆ ದೃಷ್ಟಿ ತೆಗೆದಿದ್ದಾರೆ.
ಇದೀಗ ನಟ ಅಲ್ಲು ಅರ್ಜುನ್ ಮನೆಗೆ ಸ್ಟಾರ್ ನಟರು ಭೇಟಿ ಕೊಡುತ್ತಿದ್ದಾರೆ. ಈಗಾಗಲೇ ಜೈಲಿನಿಂದ ಆಚೆ ಬಂದ ಅಲ್ಲು ಅರ್ಜುನ್ ನಿವಾಸಕ್ಕೆ ನಿರ್ದೇಶಕ ಸುಕುಮಾರ್ ಹಾಗೂ ನಿರ್ಮಾಪಕ ದಿಲ್ ರಾಜ್ ಭೇಟಿ ಕೊಟ್ಟಿದ್ದಾರೆ. ಇವರ ಜೊತೆಗೆ ಸ್ಟಾರ್ ನಟಿ ವಿಜಯ್ ದೇವರಕೊಂಡ, ಅವರ ಸಹೋದರ ಆನಂದ್ ದೇವರಕೊಂಡ, ನಟ ರಾಣ ದಗ್ಗುಬಾಟಿ, ನಾಗ ಚೈತನ್ಯಾ ಕೂಡ ಅಲ್ಲು ಅರ್ಜುನ್ ಭೇಟಿಗೆ ಬಂದಿದ್ದಾರೆ. ಅಲ್ಲದೇ ಅಲ್ಲು ಅರ್ಜುನ್ ಮನೆ ಮುಂದೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿಕೊಂಡಿದ್ದಾರೆ.
ಇನ್ನು ಜೈಲಿನಿಂದ ರಿಲೀಸ್ ಆದ ಕೂಡಲೇ ಮಾತಾಡಿದ ಅಲ್ಲು ಅರ್ಜುನ್, ಪ್ರೀತಿ ಮತ್ತು ಬೆಂಬಲಕ್ಕಾಗಿ ನನ್ನ ಎಲ್ಲ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಚಿಂತೆ ಮಾಡಲು ಏನೂ ಇಲ್ಲ, ನಾನು ಚೆನ್ನಾಗಿದ್ದೇನೆ, ಕಾನೂನು ವ್ಯವಸ್ಥೆ ಮೇಲೆ ತುಂಬಾನೆ ನಂಬಿಕೆ ಇದೆ. ನಾನು ಕಾನೂನು ವ್ಯವಸ್ಥೆಯನ್ನ ಗೌರವಿಸುತ್ತೇನೆ. ಮೃತ ಕುಟುಂಬಕ್ಕೆ ಮತ್ತೊಮ್ಮೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಇದು ದುರದೃಷ್ಟಕರ ಘಟನೆಯಾಗಿದೆ. ಸಂತ್ರಸ್ತ ಕುಟುಂಬಕ್ಕೆ ನಾನು ಬೆಂಬಲವಾಗಿ ನಿಲ್ಲುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ : ಬಿಜೆಪಿ ಹಿರಿಯ ನಾಯಕ ಎಲ್ಕೆ ಅಡ್ವಾಣಿ ಆರೋಗ್ಯದಲ್ಲಿ ದಿಢೀರ್ ಏರುಪೇರು – ಆಸ್ಪತ್ರೆಗೆ ದಾಖಲು..!